ಹುಡುಗಿಯರು ಜೀನ್ಸ್‌ ಧರಿಸಬಾರದು: ಉತ್ತರಪ್ರದೇಶದ ಮಹಾಪಂಚಾಯತ್ ಆದೇಶ

ಮಂಗಳವಾರ, 1 ಏಪ್ರಿಲ್ 2014 (14:15 IST)
ಉತ್ತರಪ್ರದೇಶ ಪಟ್ಟಣದಲ್ಲಿ ನಡೆದ ಒಂದು ಮಹಾಪಂಚಾಯತ್‌ನಲ್ಲಿ ಹುಡುಗಿಯರು ಜೀನ್ಸ್ ಧರಿಸುವುದನ್ನು ತಡೆಯಬೇಕು ಎಂದು ಆದೇಶ ನೀಡಲಾಗಿದೆ.

2 ದಿನಗಳ ಹಿಂದೆ ನಡೆದ ಮಹಾಪಂಚಾಯತ್‌ ಸಭೆಯಲ್ಲಿ ಈ ಆದೇಶವನ್ನು ನೀಡಲಾಗಿದ್ದು, ಸಭೆಯಲ್ಲಿ 52 ಹಳ್ಳಿಗಳಿಂದ ಬಂದ ಸಾವಿರಾರು ಸಂಖ್ಯೆಯ ಜನ ಭಾಗವಹಿಸಿದ್ದರು. ಹೆಚ್ಚಿನವರು ಉತ್ತರಪ್ರದೇಶ, ರಾಜಸ್ಥಾನ ಮತ್ತು ಹರಿಯಾಣಾ ರಾಜ್ಯದ ಯಾದವ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಸಾರ್ವಜನಿಕವಾಗಿ ಈ ಆದೇಶವನ್ನು ಜಾರಿ ಮಾಡಲಾಗಿದೆ ಎಂದು ಬರ್ಸಾನಾದ ಮುಖಂಡರೊಬ್ಬರು ತಿಳಿಸಿದ್ದಾರೆ.

ಕೆಲವು ನಿವಾಸಿಗಳು ಈ ಆದೇಶಕ್ಕೆ ಅಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

"ಇದು ತರ್ಕಬದ್ಧವಲ್ಲದ ಆದೇಶ. ಸ್ವಲ್ಪವೂ ಅರ್ಥವಿಲ್ಲದ ಇಂತಹ ಆದೇಶಗಳನ್ನು ಗ್ರಾಮದ ಮುಖಂಡರು ಯಾವ ಕಾರಣಕ್ಕೆ ನೀಡುತ್ತಾರೋ ಎಂದು ತಿಳಿಯುತ್ತಿಲ್ಲ" ಎಂದು ವೃತ್ತಿಯಲ್ಲಿ ಶಿಕ್ಷಕರಾಗಿರುವ ಅನುಜ್ ಪ್ರಸಾದ್ ಹೇಳಿದ್ದಾರೆ. "ತಾವು ಏನನ್ನು ಧರಿಸಬೇಕು ಎಂದು ನಿರ್ಧರಿಸ ಬೇಕಾಗಿರುವುದು ಹುಡುಗಿಯರು "ಎಂದು ಅವರು ವಾದಿಸಿದ್ದಾರೆ.

ವೆಬ್ದುನಿಯಾವನ್ನು ಓದಿ