ಅಖಂಡ ಆಂಧ್ರಕ್ಕಾಗಿ ಬೀದಿಗಿಳಿದ ಲಕ್ಷಾಂತರ ಜನಸಾಗರ

ಮಂಗಳವಾರ, 3 ಸೆಪ್ಟಂಬರ್ 2013 (12:27 IST)
PTI
PTI
ಅಖಂಡ ಆಂಧ್ರಕ್ಕಾಗಿ ನಡೆಯುತ್ತಿರುವ ಹೋರಾಟ ಇಂದಿಗೆ 35 ದಿನಗಳನ್ನು ಪೂರೈಸಿದೆ. ಆದ್ರೆ ಕೇಂದ್ರ ಸರ್ಕಾರ ಇದರ ಬಗ್ಗೆ ಯಾವುದೇ ಆಲೋಚನೆ ಮಾಡದೇ ಕೈಕಟ್ಟಿ ಕುಳಿತುಬಿಟ್ಟಿದೆ. ಆಂಧ್ರ ವಿಭಜನೆಯನ್ನು ಖಂಡಿಸಿ ಕೋಟ್ಯಾಂತರ ಜನರು ಆಂಧ್ರದ ಅನಂತಪುರದಲ್ಲಿ ಸೇರಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಸಮೈಕ್ಯಾಂಧ್ರವನ್ನು ಬೆಂಬಲಿಸಿ ವೈಎಸ್‌ಆರ್‌ ಪಕ್ಷದ ನಾಯಕ ಜಗನ್‌ಮೋಹನ್‌ರೆಡ್ಡಿ ಕೂಡ ಅನಿರ್ದಿಷ್ಟಾವಧಿಯ ಉಪವಾಸ ಕೈಗೊಂಡಿದ್ದರು. ಜಗನ್‌ ಆರೋಗ್ಯದಲ್ಲಿ ಏರುಪೇರಾಗಿರುವುದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೊಂದೆಡೆ ಚಂದ್ರಬಾಬು ನಾಯ್ಡು ನೇತೃತ್ವದ ತಂಡ ಕೂಡ ಸಮೈಕ್ಯಾಂಧ್ರಕ್ಕಾಗಿ ಯಾತ್ರೆ ನಡೆಸುತ್ತಿದೆ.

ಇಷ್ಟೆಲ್ಲಾ ವಿರೋಧವಿದ್ದರೂ, ಇಷ್ಟೋಂದು ಹೋರಾಟಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಯಾವುದೇ ವಿಷಯವನ್ನು ಪ್ರಸ್ತಾಪಿಸಿಲ್ಲ. ಯಾವುದೇ ರೀತಿಯ ಮಾತುಕತೆಗಾಗಲಿ ಅಥವ ಪ್ರತಿಭಟನಾನಿರತರನ್ನು ಓಲೈಸುವ ಕಾರ್ಯವಾಗಲೀ ಇದುವರೆಗೂ ಮಾಡಿಲ್ಲ ಎಂಬುದು ದುರಂತ.

ವೆಬ್ದುನಿಯಾವನ್ನು ಓದಿ