ಅಚ್ಚರಿ ಆದ್ರೂ ಸತ್ಯ; ನರೇಂದ್ರ ಮೋದಿಗೆ ಪಾಕಿಸ್ತಾನದ ವರ್ತಕರ ಬೆಂಬಲ

ಬುಧವಾರ, 4 ಡಿಸೆಂಬರ್ 2013 (14:18 IST)
PTI
ಗುಜರಾತ್ ಮುಖ್ಯಮಂತ್ರಿ ಬಿಜೆಪಿಯ ಪ್ರಧಾನಿ ಆಭ್ಯರ್ಥಿ ನರೇಂದ್ರ ಮೋದಿ ನೆರೆ ರಾಷ್ಟ್ರಗಳ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಮೋದಿ ಪ್ರಧಾನಿಯಾದಲ್ಲಿ ಭಾರತ- ಪಾಕ್ ರಾಷ್ಟ್ರಗಳ ವಹಿವಾಟು ಗಗನಕ್ಕೇರಲಿದೆ ಎಂದು ಶ್ಲಾಘಿಸಿದೆ.

ದೇಶದ ಗಡಿಯೊಳಗೆ ಪಾಕಿಸ್ತಾನಿಗಳು ನಿರಂತರವಾಗಿ ನುಸುಳುತ್ತಿರುವುದು ತಡೆಯಲು ಪಾಕ್ ಮೇಲೆ ಒತ್ತಡ ಹೇರುವಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಕಾರ್ಯವೈಫಲ್ಯತೆಯನ್ನು ಮೆರೆದಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನಕ್ಕೆ ಸ್ನೇಹಪರ ಭೇಟಿ ನೀಡಿದ ನಂತರ ಪಾಕ್ ವರ್ತಕರಿಗೆ ಬಿಜೆಪಿ ಫೇವರೇಟ್ ಪಕ್ಷವಾಗಿ ಹೊರಹೊಮ್ಮಿದೆ.

ಕಾಂಗ್ರೆಸ್ ಪಕ್ಷದಿಂದ ಉಭಯ ರಾಷ್ಟ್ರಗಳ ವಹಿವಾಟಿಗೆ ಹೆಚ್ಚಿನ ಆದ್ಯತೆ ದೊರೆತಿಲ್ಲ. ಒಂದು ವೇಲೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದೃಢ ನಿರ್ಧಾರಗಳನ್ನು ತಳೆದು ವಹಿವಾಟಿಗೆ ಹೆಚ್ಚಿನ ಪ್ರೊತ್ಸಾಹ ನೀಡುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನ್ ಟೆಕ್ಸ್‌ಟೈಲ್ಸ್ ಮಿಲ್ಸ್ ಅಸೋಸಿಯೇಶನ್ ಅಧ್ಯಕ್ಷ ಎಂ.ವೈ. ಸಿದ್ದಿಕಿ ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಪ್ರಧಾನಿ ಸ್ಥಾನವನ್ನು ಅಲಂಕರಿಸುವ ವ್ಯಕ್ತಿಯೊಂದಿಗೆ ಮಾತುಕತೆ ನಡೆಸಲು ಪಾಕ್ ಸರಕಾರ ಬದ್ಧವಾಗಿದೆ. ಪಾಕ್ ಬಗ್ಗೆ ಮೋದಿ ನಿಲುವು ತಿಳಿಯಲು ಆಸಕ್ತಿ ಹೊಂದಿರುವುದಾಗಿ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ