ಅಣ್ಣಾ ಹಜಾರೆಯವರ ಬಲಿಗಾಗಿ ಸ್ಕೆಚ್ ರೂಪಿಸಿದ್ದ ಕ್ರೇಜಿವಾಲ್‌ : ಸ್ವಾಮಿ ಅಗ್ನಿವೇಶ್‌ ಬಾಯ್ಬಿಟ್ಟ ಸತ್ಯ.

ಮಂಗಳವಾರ, 26 ನವೆಂಬರ್ 2013 (15:58 IST)
PTI
PTI
ಭ್ರಷ್ಟಾಚಾರದ ವಿರುದ್ಧ ಹೋರಾಟದ ವಿಷಯದಲ್ಲಿ ದೇಶದ ಗಮನವನ್ನು ಸೆಳೆದಿದ್ದ ಅಣ್ಣಾ ಹಜಾರೆಯವರನ್ನು ಬಲಿ ಕೊಡಲು ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಸ್ಕೆಚ್ ರೂಪಿಸಿದ್ದ ಎಂಬ ಭಯಾನಕ ಮಾಹಿತಿಯನ್ನು ಸ್ವಾಮಿ ಅಗ್ನಿವೇಸ್‌ ಹೊರ ಹಾಕಿದ್ದಾರೆ.

2011 ರಲ್ಲಿ ಜನಲೋಕಪಾಲ ಮಸೂದೆಯ ಅನುಷ್ಠಾನಕ್ಕೆ ಒತ್ತಾಯಿಸಿ ಅಣ್ಣಾ ಹಜಾರೆಯವರು ಹೋರಾಟ ನಡೆಸುತ್ತಿದ್ದರು. ಆ ಸಮಯದಲ್ಲಿ ಅಣ್ಣಾ ಹಜಾರೆಯವರ ಬಲಿದಾನ ಮಾಡಿಸಿ, ಹೀನಾಯವಾಗಿ ಅವರನ್ನು ಸಾಯಿಸಲು ಅರವಿಂದ್ ಕ್ರೇಜಿವಾಲ್ ಕುತಂತ್ರ ನಡೆಸಿದ್ದರು ಎಂದು ಸ್ವಾಮಿ ಅಗ್ನಿವೇಶ್ ಆರೋಪಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸಮಯದಲ್ಲಿ "ನಮ್ಮ ಹೋರಾಟ ಬಲಿದಾನವನ್ನು ಬೇಡುತ್ತದೆ ಎಂದು ಹೇಳಿದ್ರಂತೆ. ಅಷ್ಟೆ ಅಲ್ಲ ಉಪವಾಸ ಸತ್ಯಾಗ್ರಹದಲ್ಲಿ ಯಾರ ಬಲಿದಾನವಾದರೂ ಪರವಾಗಿಲ್ಲ. ಆದ್ರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಒಂದು ವೇಳೆ ಅಣ್ಣಾ ಹಜಾರೆಯವರು ಉಪವಾಸ ಕುಳಿತಲ್ಲೇ ಪ್ರಾಣ ಕಳೆದುಕೊಂಡಿದ್ದೇ ಆದರೆ ಈ ನಮ್ಮ ಹೋರಾಟ ಇನ್ನಷ್ಟು ಕಾವು ಪಡೆಯುತ್ತದೆ ಎಂದು ಆಲೋಚನೆ ಮಾಡಿದ್ದ ಅರವಿಂದ ಕ್ರೇಜಿವಾಲ್‌ ಅಣ್ಣಾ ಹಜಾರೆಯವರ ಸಾವಿಗಾಗಿ ಕಾಯುತ್ತ ಕುಳಿತಿದ್ದರು ಎಂದು ಸ್ವಾಮಿ ಅಗ್ನಿವೇಶ್‌ ಆರೋಪಿಸಿದ್ದಾರೆ.

ಅಕಸ್ಮಾತ್ ಅಣ್ಣಾ ಹಜಾರೆಯವರು ಇಲ್ಲವಾದಲ್ಲಿ, ಅಣ್ಣಾ ಅನುಪಸ್ಥಿತಿಯ ಅನುಕಂಪವನ್ನು ಬಳಸಿಕೊಂಡು ಜನರನ್ನು ಇಬ್ಬಷ್ಟು ಪ್ರೇರೇಪಿಸುವ ಮೂಲಕ ಹೋರಾಟಕ್ಕೆ ತಾನೇ ನಾಯಕನಾಗಬಹುದೆಂಬ ಲೆಕ್ಕಾಚಾರ ಅರವಿಂದ್ ಕೇಜ್ರಿವಾಲ್ ಅವರದಾಗಿತ್ತು ಎಂದು ಅಗ್ನಿವೇಶ್‌ ಹೇಳಿದ್ದಾರೆ.

ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಆಗಮಿಸಿದ ಜನರನ್ನು ‘ಆಮ್ ಆದ್ಮಿ’ ಪಕ್ಷಕ್ಕೆದ ಮತಬ್ಯಾಂಕುಗಳನ್ನಾಗಿ ಪರಿವರ್ತಿಸಿಕೊಳ್ಳಲು ಅರವಿಂದ ಕ್ರೇಜಿವಾಲ್ ಪ್ರಯತ್ನಿಸಿದ್ದರು. ಆದ್ರೆ ಅದು ಸಾಧ್ಯವಾಗಲಿಲ್ಲ ಎಂದು ಅಗ್ನಿವೇಶ್‌ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ