ಅತ್ಯಾಚಾರ ಆರೋಪದಲ್ಲಿ ಶಾಸಕನ ಪುತ್ರನ ಬಂಧನ

ಶುಕ್ರವಾರ, 29 ನವೆಂಬರ್ 2013 (13:10 IST)
PR
ಮದುವೆಯಾಗುವುದಾಗಿ ನಂಬಿಸಿ 35 ವರ್ಷ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಬಿಎಸ್‌ಪಿ ಶಾಸಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ 40 ವರ್ಷ ವಯಸ್ಸಿನ ಆರೋಪಿ ಶಿವಭೂಷಣ್, ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಅತನಿಂದ ಮಗುವನ್ನು ಪಡೆದಿದ್ದೇನೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಆರೋಪಿ ಶಿವಭೂಷಣ್ ತಂದೆ ಉತ್ತರಪ್ರದೇಶದ ಮಂಗೋಲ್‌ಪುರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಪಿ ನಾಯಕರಾಗಿದ್ದಾರೆ.

ಒಂದು ದಿನ ನನಗೆ ನೀಡಿದ ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ನಾನು ಮತ್ತಿನಲ್ಲಿರುವಾಗ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಮದುವೆಯಾಗುವುದಾಗಿ ಭರವಸೆ ನೀಡಿ ಬಾಡಿಗೆ ಮನೆಯಲ್ಲಿ ಇರಿಸಿದ್ದನು. ಆತನಿಂದ ಮಗುವಾಗಿದೆ ಎಂದು ಆರೋಪಿಸಿದ್ದಾಳೆ.

ಆರೋಪಿ ಶಿವಭೂಷಣನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ