ಅಧಿಕಾರಿ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಗೆ ಜೈಲು ಶಿಕ್ಷೆ

ಶನಿವಾರ, 5 ಏಪ್ರಿಲ್ 2014 (13:08 IST)
ಹಿರಿಯ ಅಧಿಕಾರಿ ಜೆ.ಪಿ.ಜೋಶಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಮಹಿಳೆಯೇ ಸುಳ್ಳು ಆರೋಪದಿಂದಾಗಿ ಬಂಧಿತಳಾಗಿ ಜೈಲು ಸೇರಿದ್ದಾಳೆ.

ಅತ್ಯಾಚಾರ ಆರೋಪದಿಂದ ಅಮಾನತ್ತುಗೊಂಡು ಜೈಲು ಶಿಕ್ಷೆ ಅನುಭವಿಸುತ್ತಿರುವ ಜೆ.ಪಿ.ಜೋಶಿ, ಮಹಿಳೆ ಮತ್ತು ಇತರ ಮೂವರು ವ್ಯಕ್ತಿಗಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿತ್ತು. ಆದೇಶದ ಹಿನ್ನೆಲೆಯಲ್ಲಿ ಮಹಿಳೆ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಳು.

ಪ್ರವಾಸೋದ್ಯಮ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಜೆ.ಪಿ.ಜೋಶಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಮತ್ತು ಇತರ ಮೂವರು ಪ್ರಕರಣ ದಾಖಲಿಸಿದ ನಂತರ, ಜೋಶಿ ಪ್ರತಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಹಿಳೆ ಮತ್ತು ಇತರ ಮೂವರು ಸೇರಿ ಜೋಶಿಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದ ನಕಲಿ ಸಿಡಿ ತಯಾರಿಸಿರುವುದು ಬಹಿರಂಗವಾಗಿತ್ತು.

ಆರೋಪಿ ಮಹಿಳೆಯನ್ನು ಡಿಸೆಂಬರ್ 6 ರಂದೇ ಬಂಧಿಸಲಾಗಿತ್ತು. ಆದರೆ, 25 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್‌ ಮೇಲೆ ಮಧ್ಯಂತರ ಜಾಮೀನು ನೀಡಲಾಗಿತ್ತು.

ವೆಬ್ದುನಿಯಾವನ್ನು ಓದಿ