ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾದ ಪಾದ್ರಿ

ಶುಕ್ರವಾರ, 25 ಏಪ್ರಿಲ್ 2014 (19:29 IST)
10 ವರ್ಷದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ ಸ್ಥಳೀಯ ಚರ್ಚಿನ ಪಾದ್ರಿಯೊಬ್ಬ ತಾನು ಮಾಡಿದ ಅನರ್ಥದ ಕುರಿತು ಎಲ್ಲರಿಗೂ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. 
 
ಆರೋಪಿಯನ್ನು ರಾಜು ಕೋಕ್ಕನ್ ಎಂದು ಗುರುತಿಸಲಾಗಿದ್ದು, ಆತ ಥಕ್ಕಟ್ಟುಸರಿಯಲ್ಲಿನ ಸೇಂಟ್ ಪಾಲ್ ಕ್ಯಾಥೋಲಿಕ್ ಚರ್ಚ್‌ನಲ್ಲಿ  ಪಾದ್ರಿಯಾಗಿದ್ದ.
 
ಅವನ ವಿರುದ್ಧ ಐಪಿಸಿ ವಿಭಾಗ 376ರ ಅಡಿಯಲ್ಲಿ 2012 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆಯ ವಿಭಾಗ 4ರ ಪ್ರಕಾರ ಕೇಸ್ ದಾಖಲಿಸಲಾಗಿದೆ.  

ಅವನು ಬಾಲಕಿಯ ನಗ್ನ ಚಿತ್ರಗಳನ್ನು ಕೂಡ  ತೆಗೆದಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ