ಅಪ್ರಾಪ್ತ ಬಾಲಕಿಯ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆ ಅಪರಾಧವಲ್ಲ: ಕೋರ್ಟ್

ಸೋಮವಾರ, 31 ಮಾರ್ಚ್ 2014 (15:28 IST)
" ಹುಡುಗಿ 18 ವರ್ಷದ ಒಳಗಿನವಳಾಗಿದ್ದರೆ, ಆ ಹುಡುಗಿಯ ಸಮ್ಮತಿಯೊಂದಿಗೆ ಯಾವುದೇ ಹುಡುಗ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೆ ಅಂತಹ ವ್ಯಕ್ತಿಯನ್ನು ಶಿಕ್ಷಿಸುವ ಯಾವುದೇ ಹಕ್ಕು ಇಲ್ಲ" ಎಂದು ದೆಹಲಿ ನ್ಯಾಯಾಲಯ ಹೇಳಿದೆ.

ಪಶ್ಚಿಮ ಬಂಗಾಳದ 22 ವರ್ಷದ ವ್ಯಕ್ತಿಯೊಬ್ಬ 15 ವರ್ಷದ ಹುಡುಗಿಯನ್ನು ಅಪಹರಿಸಿ ಆಕೆಯನ್ನು ಅತ್ಯಾಚಾರ ಮಾಡಿ ನಂತರ ಆ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಹುಡುಗಿಯ ಪೋಷಕರು ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಸೂಕ್ತ ಸಾಕ್ಷಾಧಾರಗಳನ್ನು ಪರಿಶೀಲಿಸಿದ ನಂತರ ಇಬ್ಬರು ಒಪ್ಪಿಕೊಂಡು ಮದುವೆಯಾಗಿದ್ದಾರೆ. ಹೀಗಾಗಿ ಹುಡುಗನ ವಿರುದ್ಧ ಅಪಹರಣದ ಕೇಸನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

18 ವರ್ಷದ ಒಳಗಿನ ಹುಡುಗಿಯನ್ನು ಮದುವೆಯಾಗಿದ್ದರಿಂದ ಮಕ್ಕಳ ಲೈಂಗಿಕ ಅಪರಾಧ ತಡೆ ಕಾಯ್ದೆ (POCSO)ಯ ಅನ್ವಯ ಆ ಹುಡುಗನನ್ನು ಶಿಕ್ಷಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಅಭಿಪ್ರಾಯಪಟ್ಟಿತು. ಆದರೆ "ಹುಡುಗಿ ತಾನಾಗಿಯೇ ಒಪ್ಪಿಕೊಂಡು ಆ ಹುಡುಗನೊಂದಿಗೆ ಹೋಗಿದ್ದಾಳೆ. ಇಬ್ಬರು ಮದುವೆ ಕೂಡ ಆಗಿದ್ದಾರೆ. ಹೀಗಾಗಿ 18 ವರ್ಷದೊಳಗಿನ ಹುಡುಗಿಯ ಸಮ್ಮತಿಯೊಂದಿಗೆ ಹುಡುಗನೊಬ್ಬ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅಂತಹ ಹುಡುಗನನ್ನು ಶಿಕ್ಷಿಸಲು ಯಾವುದೇ ಹಕ್ಕು ಇಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವೆಬ್ದುನಿಯಾವನ್ನು ಓದಿ