ಅಬ್ದುಲ್ ಕರೀಂಗೆ ಮತ್ತೆ 7 ವರ್ಷ ಶಿಕ್ಷೆ

ಶುಕ್ರವಾರ, 30 ನವೆಂಬರ್ 2007 (20:00 IST)
ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ತೆಲಗಿಗೆ ತನ್ನ ಚಾಲಕ ಕ್ರಿಸ್ಟೋಫರ್ ಭಟ್ಟಿ ಹತ್ಯೆಗೆ ಸಂಬಂಧಿಸಿದಂತೆ 7 ವರ್ಷಗಳ ಕಠಿಣ ಶಿಕ್ಷೆಯನ್ನು ಮುಂಬೈ ಕೋರ್ಟ್ ವಿಧಿಸಿದೆ. ಜೈಲಿನ ಶಿಕ್ಷೆ ಅವಧಿ ಸೇರಿದಂತೆ 3 ಲಕ್ಷ ರೂ.ದಂಡವನ್ನು ವಿಧಿಸಲಾಗಿದ್ದು, ಈ ಶಿಕ್ಷೆಯ ಅವಧಿಯು ಛಾಪಾ ಕಾಗದ ಹಗರಣದ ಜೈಲುಶಿಕ್ಷೆಯ ಜತೆ ಜತೆಯಾಗಿ ಇರುವುದಿಲ್ಲ.

ಬಹುಕೋಟಿ ನಕಲಿ ಛಾಪಾಕಾಗದ ಹಗರಣದಲ್ಲಿ ತೆಲಗಿ ಅವರಿಗೆ ಇನ್ನೂ ಐವರ ಜತೆ ಶಿಕ್ಷೆ ವಿಧಿಸಲಾಗಿದೆ. ನಕಲಿ ವಿಮಾ ಪಾಲಿಸಿ ಚಾಪಾ ಕಾಗದ ಜಾಲದಲ್ಲಿ ಮಾಜಿ ಸಂಸದರನ್ನೊಬ್ಬರನ್ನು ಭಾಗಿಯಾಗಿಸಲು ತೆಲಗಿ ಪ್ರಯತ್ನಿಸಿದ್ದನು ಎಂದು ಆರೋಪ ಹೊರಿಸಲಾದ ಹಿನ್ನೆಲೆಯಲ್ಲಿ ದೆಹಲಿ ಕೋರ್ಟ್ ಇದಕ್ಕೆ ಮುಂಚೆ ಹಗರಣದ ಮರುತನಿಖೆಗೆ ಆದೇಶ ನೀಡಿತ್ತು.

ತೆಲಗಿ ಮತ್ತು ಇನ್ನೂ ಮೂವರ ವಿರುದ್ಧ ಪ್ರಕರಣ ಸಮಾಪ್ತಿಗೊಳಿಸಬೇಕೆಂಬ ಸಿಬಿಐ ಮನವಿಯನ್ನು ಎಎಸ್‌ಜೆ ದಿನೇಶ್ ದಯಾಳ್ ತಳ್ಳಿಹಾಕಿದರು. ಆರೋಪಿಯೆಂದು ಕಂಡುಬಂದ ಮಾಜಿ ಸಂಸದರು ತಾವು ಹಣ ಸ್ವೀಕರಿಸಲಿಲ್ಲವೆಂದು ಹೇಳಿದ ಮಾತ್ರಕ್ಕೆ ಸಿಬಿಐ ಪ್ರಕರಣ ಸಮಾಪ್ತಿಗೊಳಿಸಿದ ವರದಿ ಕಳಿಸಲು ಸಿದ್ಧವಾದಂತೆ ಕಾಣುತ್ತಿದೆ ಎಂದು ಅವರು ನುಡಿದರು.

ವೆಬ್ದುನಿಯಾವನ್ನು ಓದಿ