ಅಮಾನತಾದ ಪೊಲೀಸ್ ಅಧಿಕಾರಿ ಪತ್ನಿ ಮಕ್ಕಳಿಗೆ ಗುಂಡಿಕ್ಕಿ ಆತ್ಮಹತ್ಯೆ

ಮಂಗಳವಾರ, 25 ಫೆಬ್ರವರಿ 2014 (10:59 IST)
PR
PR
ಜಗದಲ್‌ಪುರ್: ನ್ಯಾಯಾಧೀಶರೊಬ್ಬರನ್ನು ಥಳಿಸಿ ಅಮಾನತಾಗಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಗುಂಡಿಕ್ಕಿ ನಂತರ ಸ್ವತಃ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಸೋಮವಾರ ಸಂಜೆ ನಡೆದಿದೆ. ಸ್ವತಃ ಗುಂಡು ಹಾರಿಸಿಕೊಂಡ ನಗರದ ಪೊಲೀಸ್ ಸೂಪರಿಂಟೆಂಡೆಂಟ್ ದೇವನಾರಾಯಣ್ ಪಟೇಲ್ ಮತ್ತು ಅವರ ಪತ್ನಿ ಮೃತಪಟ್ಟಿದ್ದಾರೆ. ಅವರ ಪುತ್ರ ಮತ್ತು ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದು, ರಾಯ್ಪುರದ ಆಸ್ಪತ್ರೆಯಲ್ಲಿದ್ದಾರೆ. ಕುಡಿದು ಚಾಲನೆ ಮಾಡುತ್ತಿದ್ದ ಜಿಲ್ಲಾ ಕೋರ್ಟ್ ಕೋರ್ಟ್ ನ್ಯಾಯಾಧೀಶರಿಗೆ ಪೊಲೀಸ್ ಅಧಿಕಾರಿ ಪಟೇಲ್ ಥಳಿಸಿದ್ದರಿಂದ ಅವರನ್ನು ಅಮಾನತುಗೊಳಿಸಲಾಗಿತ್ತು.

ಇದರಿಂದ ತೀವ್ರವಾಗಿ ಮನನೊಂದಿದ್ದ ಪಟೇಲ್ ರಾತ್ರಿ 2 ಗಂಟೆಗೆ ತನ್ನ ಸೇವಾ ಶಸ್ತ್ರಾಸ್ತ್ರ ಬಳಸಿ ಕುಟುಂಬಕ್ಕೆ ಗುಂಡಿಕ್ಕಿದನಲ್ಲದೇ ಸ್ವಯಂ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಯಾವುದೇ ಡೆತ್ ನೋಟ್ ಅವರು ಬರೆದಿಟ್ಟಿರುವುದು ಪತ್ತೆಯಾಗಿಲ್ಲ.

ವೆಬ್ದುನಿಯಾವನ್ನು ಓದಿ