ಅಮೇರಿಕಾದಲ್ಲಿ ಮೋದಿ ವಿರುದ್ಧ ಪ್ರಚಾರ

ಶುಕ್ರವಾರ, 11 ಏಪ್ರಿಲ್ 2014 (13:00 IST)
ಅಮೇರಿಕಾದ ಕಾಂಗ್ರೆಸ್‌ನ ವಿವಾದಾತ್ಮಕ ಪ್ರಸ್ತಾವನೆಗೆ (ಎಚ್ ರೆಸ್ 417) ಈಗ 50ಕ್ಕಿಂತ ಹೆಚ್ಚು, ಸಹಪ್ರಾಯೋಜಕತ್ವ ಲಭಿಸಿದೆ. ಆ ಪ್ರಸ್ತಾವನೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ವೀಸಾ ನೀಡದಿರುವ ಅಮೆರಿಕನ್ ಆಡಳಿತದ ನೀತಿಗೆ ಅಂಟಿಕೊಂಡಿರುವುದಲ್ಲದೇ ಇತರೇ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
PTI

ನ್ಯೂಜೆರ್ಸಿಯಿಯ ರಷ್ ಹೊಲ್ಟ್ ಮತ್ತು ಕ್ಯಾಲಿಫೋರ್ನಿಯಾದ ಬಾರ್ಬರಾ ಲೀ ಅವರು ಪ್ರಸ್ತಾವನೆಗೆ (ಎಚ್ ರೆಸ್ 417) ಸಹಿ ಮಾಡುವುದರ ಮೂಲಕ ಇದರ ಪ್ರಾಯೋಜಕರ ಒಟ್ಟು ಸಂಖ್ಯೆ 51ಕ್ಕೆ ಬೆಳೆದಿದೆ ಎಂದು ವರದಿಯಾಗಿದೆ.

ಈ ದ್ವಿ - ಪಕ್ಷಗಳ ಪ್ರಸ್ತಾವನೆಯನ್ನು ಡೆಮಾಕ್ರಾಟಿಕ್ ಕಾಂಗ್ರೆಸ್ಸಿಗ ಕೀತ್ ಎಲ್ಲಿಸನ್ ಮತ್ತು ರಿಪಬ್ಲಿಕನ್ ಪಕ್ಷದ ಜೋ ಪಿಟ್ಸ್ ನವೆಂಬರ್‌ನಲ್ಲಿ ಪರಿಚಯಿಸಿದ್ದರು. ಅಲ್ಲಿಂದೀಚೆಗೆ, ಈ ಪ್ರಸ್ತಾವನೆ ವಿವಿಧ ಭಾರತೀಯ ಅಮೆರಿಕನ್‌ ಗುಂಪುಗಳ ನಡುವೆ ವಿವಾದಿತ ವಿಷಯವಾಗಿ ಪರಿಣಮಿಸಿತ್ತು. ಅಷ್ಟೇ ಅಲ್ಲ ಅನೇಕ ಅಮೇರಿಕಾದ ಶಾಸಕರು ಈ ಪ್ರಸ್ತಾವನೆಯನ್ನು ಪರಿಚಯಿಸಲಾಗಿರುವುದರ ಉದ್ದೇಶಗಳ ಕುರಿತು ಪ್ರಶ್ನಿಸಿದ್ದಾರೆ.

ಅನೇಕ ಸಂಸದರು ಇದರ ಸಹಪ್ರಾಯೋಜಕತ್ವದಿಂದ ಹೊರಬಂದಿದ್ದಾರೆ. ಆದರೆ ಈ ವಾರ, ಹಾಲ್ಟ್ ಮತ್ತು ಲೀ ಸಹಿ ಮಾಡುವುದರೊಂದಿಗೆ ನಿನ್ನೆ ಇದರ ಪ್ರಾಯೋಜಕರ ಸಂಖ್ಯೆ 51ಕ್ಕೆ ಏರಿತು. ಇದರಲ್ಲಿ 26 ರಿಪಬ್ಲಿಕನ್ ಮತ್ತು 25 ಡೆಮೋಕ್ರಾಟಿಕ್ ಪಕ್ಷದವರಿದ್ದಾರೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ