ಅರವಿಂದ್ ಕೇಜ್ರಿವಾಲ್ ಇಂದಿನ ಮುಖ್ಯಮಂತ್ರಿ ನಾಳಿನ ಪ್ರಧಾನಮಂತ್ರಿ: ಅಭಿಮಾನಿಗಳು

ಶನಿವಾರ, 28 ಡಿಸೆಂಬರ್ 2013 (19:17 IST)
PR
ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಅಧಿಕಾರ ಸ್ವೀಕರಿಸಿದ ರಾಮಲೀಲಾ ಮೈದಾನದಲ್ಲಿ ಪೋಸ್ಟರ್‌ಗಳ ಭರಾಟೆ ಕಂಡು ಬಂದಿತು. ಪೋಸ್ಟರ್‌ಗಳಲ್ಲಿ ಕೇಜ್ರಿವಾಲ್ ಇಂದಿನ ಮುಖ್ಯಮಂತ್ರಿ ನಾಳಿನ ಪ್ರಧಾನಮಂತ್ರಿ ಎಂದು ಬರೆದಿರುವ ಘೋಷಣೆಗಳು ಜನಮನ ಸೆಳೆದವು.

ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರಕ್ಕೆ ಗಾಜಿಯಾಬಾದ್ ನಿವಾಸದಿಂದ ಹೊರಬಂದಾಗ, ವೃದ್ದನೊಬ್ಬ ಅವರನ್ನು ಆಶೀರ್ವದಿಸಿ ಯಾಕೆ ಮುಖ್ಯಮಂತ್ರಿ ನೀನು ಪ್ರಧಾನಮಂತ್ರಿಯಾಗುತ್ತೀಯಾ ಎಂದು ಹಾರೈಸಿದ್ದಾರೆ.

ರಾಮಲೀಲಾ ಮೈದಾನದಲ್ಲಿರುವ ಪೋಸ್ಟರ್‌ಗಳಿಗೂ ಆಮ್ ಆದ್ಮಿ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಆದರೆ, ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟದಂತೆ ರಾಜಕೀಯ ಕ್ರಾಂತಿ ಆರಂಭವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಸದಸ್ಯ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷ ದೆಹಲಿ ರಾಜ್ಯದಲ್ಲಿ ಸರಕಾರ ಅಲಂಕರಿಸಿದೆ. ರಾಷ್ಟ್ರಮಟ್ಟದಲ್ಲಿ ಬೆಳೆಯುವ ಬಗ್ಗೆ ಹೇಳುವುದು ಅವಸರವಾದಿತನವಾಗುತ್ತದೆ. ಕೇಜ್ರಿವಾಲ್ ವಿಧಾನಸಭೆ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲೂ ಜಯಗಳಿಸುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಆಪ್ ಪಕ್ಷಕ್ಕೆ 28 ಕ್ಷೇತ್ರಗಳಲ್ಲಿ ಜಯ ದೊರೆತಿದೆ. ಅಸಾಧ್ಯವಾದುದ್ದು ಯಾವುದೇ ಇಲ್ಲ. ರಾಜಕೀಯದಲ್ಲಿ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಆಪ್ ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ