ಅರವಿಂದ್ ಕೇಜ್ರಿವಾಲ್ ಜನಪರ ಕಾರ್ಯನಿರ್ವಹಿಸುವ ವಿಶ್ವಾಸವಿದೆ: ಅಣ್ಣಾ ಹಜಾರೆ

ಶನಿವಾರ, 28 ಡಿಸೆಂಬರ್ 2013 (12:54 IST)
PTI
ದೆಹಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಹಲವು ವರ್ಷಗಳಿಂದ ಜೊತೆಯಾಗಿ ಕೆಲಸ ಮಾಡಿದ ಅನುಭವವಿರುವುದರಿಂದ ಜನಪರ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಕಳೆದ 2011ರಲ್ಲಿ ಸಶಕ್ತ ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸಿ ರಾಮಲೀಲಾ ಮೈದಾನದಲ್ಲಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರೊಂದಿಗೆ 16 ದಿನಗಳ ಕಾಲ ನಿರಶನದಲ್ಲಿ ಪಾಲ್ಗೊಂಡಿದ್ದ ಕೇಜ್ರಿವಾಲ್, ಇದೀಗ ದೆಹಲಿ ದೊರೆಯಾಗಿದ್ದಾರೆ.

ರಾಜಕೀಯ ಪಕ್ಷವನ್ನು ಸ್ಥಾಪಿಸಬೇಕೋ ಅಥವಾ ಬೇಡವೋ ಎನ್ನುವ ಭಿನ್ನಮತದಿಂದಾಗಿ ಹಜಾರೆ ಮತ್ತು ಕೇಜ್ರಿವಾಲ್ ಪರಸ್ಪರ ದೂರವಾಗಿದ್ದರು.

76 ವರ್ಷ ವಯಸ್ಸಿನ ಅಣ್ಣಾ ಹಜಾರೆ ಇಂದು ಮಹಾರಾಷ್ಟ್ರದಲ್ಲಿರುವ ಸ್ವಗ್ರಾಮದಲ್ಲಿ ಮಾತನಾಡಿ, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅನಾರೋಗ್ಯದಿಂದ ಭಾಗವಹಿಸಲು ಸಾಧ್ಯವಿಲ್ಲವಾಗಿದ್ದರಿಂದ ಹೂಗುಚ್ಚವನ್ನು ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ಆಶೀರ್ವಾದ ಸದಾ ನನ್ನೊಂದಿಗಿರುವುದು ತುಂಬಾ ಮಹತ್ವದ ವಿಷಯವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ