ಅರವಿಂದ್ ಕೇಜ್ರಿವಾಲ್ ನನ್ನ ದೇವರು, ಹೀರೋ ನಂ 1 ಎಂದ ಆಟೋ ಚಾಲಕ ಲಾಲಿ

ಬುಧವಾರ, 9 ಏಪ್ರಿಲ್ 2014 (14:56 IST)
ನಿನ್ನೆ ಕೇಜ್ರಿವಾಲ್ ಕೆನ್ನೆಗೆ ಹೊಡೆದಿದ್ದ ಆಟೋ ಚಾಲಕ ಲಾಲಿ ತನ್ನ ದುಷ್ಕೃತ್ಯಕ್ಕಾಗಿ ಕ್ಷಮೆಯಾಚಿಸಿದ್ದಾನೆ. ಅಲ್ಲದೇ ಆಪ್ ನಾಯಕ 'ನನ್ನ ದೇವರು', 'ಹೀರೋ ನಂ 1' ಎಂದು ಹೊಗಳಿದ್ದಾನೆ ಎಂದು ವರದಿಯಾಗಿದೆ.

ದೆಹಲಿಯಲ್ಲಿನ ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇರುವ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ಪ್ರಚಾರದ ವೇಳೆ ತನ್ನ ಮೇಲೆ ತನ್ನ ಮೇಲೆ ದಾಳಿ ನಡೆಸಿದ್ದ ಇಬ್ಬರು ವ್ಯಕ್ತಿಗಳನ್ನು ಭೇಟಿಯಾಗಿದ್ದಾರೆ.
PTI

ನಿನ್ನೆ ಉತ್ತರದಕ್ಷಿಣ ದೆಹಲಿಯಲ್ಲಿ ತಮ್ಮ ಕೆನ್ನೆಗೆ ಏಟು ಕೊಟ್ಟಿದ್ದ ಆಟೋ ರಿಕ್ಷಾ ಚಾಲಕ ಲಾಲಿಯನ್ನು, ಆತನ ಮನೆಯಲ್ಲಿ ಆಪ್ ನಾಯಕ ಮೊದಲು ಭೇಟಿಯಾದರು.

ಆ ಸಮಯದಲ್ಲಿ ಕೈಗಳನ್ನು ಕಟ್ಟಿಕೊಂಡು, ಪಶ್ಚಾತ್ತಾಪ ಪ್ರಕಟಿಸಿದ ರಿಕ್ಷಾ ಚಾಲಕ ಲಾಲಿ "ನಾನು ಕೇಜ್ರಿವಾಲ್‌ರಲ್ಲಿ ಕ್ಷಮೆ ಕೇಳುತ್ತೇನೆ. ಅವರ ಮೇಲೆ ದಾಳಿ ಮಾಡಿ ನಾನು ದೊಡ್ಡ ತಪ್ಪು ಮಾಡಿದೆ" ಎಂದು ಹೇಳಿದ್ದಾನೆ.

ಅಲ್ಲದೇ ಆತ ಅರವಿಂದ್ ಕೇಜ್ರಿವಾಲ್ "ನನ್ನ ದೇವರು, ಹೀರೋ ನಂ 1" ಎಂದು ಹೇಳುವುದರ ಮೂಲಕ ಯು-ಟರ್ನ್ ಹೊಡೆದಿದ್ದಾನೆ.

"ನಾನು ಆತನನ್ನು ಕ್ಷಮಿಸಿದ್ದೇನೆ" ಎಂದು ಆಪ್ ನಾಯಕ ಹೇಳಿದ್ದಾರೆ.

ಕೇಜ್ರಿವಾಲ್ ನಿನ್ನೆ ತೆರೆದ ವಾಹನವೊಂದರಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಹೂಮಾಲೆ ತೊಡಿಸುವ ನೆಪದಿಂದ ಬಳಿ ಬಂದ 38 ವರ್ಷದ ಲಾಲಿ ಅವರ ಕೆನ್ನೆಗೆ ಬಲವಾಗಿ ಹೊಡೆದಿದ್ದ. ಆಗ ಆತನನ್ನು ಹಿಡಿದ ಆಪ್ ಕಾರ್ಯಕರ್ತರು ಚೆನ್ನಾಗಿ ಥಳಿಸಿದ್ದರು. ನಂತರ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

ಏಟು ಕೊಟ್ಟ ಕೇಜ್ರಿವಾಲ್ "ಸುಳ್ಳುಗಾರ", "ಆಚೋ ಚಾಲಕರ ವಂಚಕ " ಎಂದು ಆತ ಆರೋಪಿಸಿದ್ದ. "ಆತ ಆಪ್ ಪಕ್ಷದ ಬೆಂಬಲಿಗ. ಅವನ್ಯಾಕೆ ದಾಳಿ ಮಾಡಿದ ಎಂದು ತಿಳಿಯುತ್ತಿಲ್ಲ ಎಂದು ಅವರ ಕುಟುಂಬ" ಹೇಳಿದೆ.

ಕಳೆದ ಶುಕ್ರವಾರ ತನ್ನ ಮೇಲೆ ದಾಳಿ ನಡೆಸಿದ್ದ 19 ರ ಅಬ್ದುಲ್ ವಾಹಿದ್‌ನನ್ನು ಕೂಡ ಕೇಜ್ರಿವಾಲ್ ಭೇಟಿಯಾದರು.

ಕಳೆದ ಕೆಲವು ವಾರಗಳಲ್ಲಿ ಆಪ್ ನಾಯಕನ ಮೇಲೆ ಅನೇಕ ಬಾರಿ ದಾಳಿಗಳು ನಡೆದಿವೆ.

ವೆಬ್ದುನಿಯಾವನ್ನು ಓದಿ