ಅರವಿಂದ್ ಕೇಜ್ರಿವಾಲ್ ಪುಂಗಿ ನಾದಕ್ಕೆ ದೆಹಲಿ ಜನತೆ ನೃತ್ಯ: ಠಾಕ್ರೆ ಲೇವಡಿ

ಮಂಗಳವಾರ, 31 ಡಿಸೆಂಬರ್ 2013 (14:03 IST)
PTI
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ಆಮ್ ಆದ್ಮಿ ಪಕ್ಷ ನೀಡಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾವಾಡಿಗನಂತೆ ಪುಂಗಿ ಉದುತ್ತಿದ್ದಾರೆ. ದೆಹಲಿ ಜನತೆ ಹಾವಿನಂತೆ ತಲೆಯಾಡಿಸುತ್ತಿದ್ದಾರೆ ಎಂದು ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಟೀಕಿಸಿದ್ದಾರೆ.

ಮಿತ್ರಪಕ್ಷವಾದ ಬಿಜೆಪಿ 32 ಸೀಟುಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿತ್ತು. ಬಿಜೆಪಿ ಅಲ್ಪಮತದ ಸರಕಾರ ರಚಿಸಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ಹೇಳಿದ್ದಾರೆ.

ಒಂದು ವೇಳೆ ಆಮ್ ಆದ್ಮಿ ಪಕ್ಷದ ಸರಕಾರ ದೆಹಲಿ ಜನತೆಗೆ ಉಚಿತ ನೀರು ಮತ್ತು ರಿಯಾಯಿತಿ ದರದಲ್ಲಿ ವಿದ್ಯುತ್ ನೀಡುವುದು ಸಾಧ್ಯವಾಗುತ್ತದೆ ಎಂದಾದಲ್ಲಿ ಬಿಜೆಪಿ ಕೂಡಾ ಹಾಗೇ ಮಾಡಬಹುದಿತ್ತು ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಜಾದು ಮಾಡಿದೆ ಎನ್ನುವುದನ್ನು ಒಪ್ಪಬೇಕಾಗುತ್ತದೆ. ಸಾಮಾನ್ಯ ಜನತೆ ಮತ್ತು ಸರಕಾರಿ ಅಧಿಕಾರಿಗಳು ಕೇಜ್ರಿವಾಲ್ ಪರವಾಗಿದ್ದಾರೆ ಎನ್ನುವುದು ಸಾಬೀತಾಗಿದೆ ಎಂದು ತಿಳಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಲಾಲು ಪ್ರಸಾದ್ ಯಾದವ್ ಕೂಡಾ ಕೇಜ್ರಿವಾಲ್‌ರಂತೆ ಹೂಂಕರಿಸಿದ್ದರು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಲಾಲು ಯಾದವ್ ಭ್ರಷ್ಟರ ಪರವಾಗಿದ್ದರು. ಇದೀಗ ಭ್ರಷ್ಟಾಚಾರದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಶಿವಸೇನಾ ಮುಖ್ಯಸ್ಥ ಉದ್ಭವ್ ಠಾಕ್ರೆ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ