ಅವರು ನನ್ನನ್ನೇ ಮುಟ್ಟಲಿಲ್ಲ. ಇನ್ನು ರೇಪ್ ಹೇಗೆ ಮಾಡ್ತಾನೆ? ಅಸರಾಮ್ ಪತ್ನಿ ಪ್ರೆಶ್ನೆ

ಬುಧವಾರ, 30 ಅಕ್ಟೋಬರ್ 2013 (13:07 IST)
PTI
PTI
ಅಸರಾಮ್ ಬಾಪು ವಿರುದ್ಧ ಹೊರಿಸಲಾಗಿರುವ ಆರೋಪಗಳು ಯಾವುದೂ ಕೂಡ ಸತ್ಯವಲ್ಲ. ಅವರು ಇಷ್ಟು ದಿನಗಳಾದರೂ ಸ್ವಂತ ಹೆಂಡತಿಯಾಗಿರುವ ನನ್ನನ್ನೇ ಮುಟ್ಟಿಲ್ಲ. ಹೀಗಿರುವಾಗ ರೇಪ್ ಮಾಡಲು ಹೇಗೆ ಸಾಧ್ಯ? ಅಸಾರಮ್ ಬಾಪು ರೇಪ್ ಮಾಡಿದ್ದಾರೆ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು ಎಂದು ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪುವಿನ ಪತ್ನಿ ಪ್ರೆಶ್ನಿಸಿದ್ದಾರೆ.

ಈ ಬಗ್ಗೆ ಬಹಿರಂಗವಾಗಿ ಹೇಳಿರುವ ಅಸಾರಾಮ್ ಬಾಪು ಪತ್ನಿ ಲಕ್ಷ್ಮಿ "ನನ್ನ ಪತಿ ಎಂದಿಗೂ ಲೈಂಗಿಕ ದೌರ್ಜನ್ಯ ಎಸಗಿಲ್ಲ. ಅವರು ಲೈಂಗಿಕ ದೌರ್ಜನ್ಯ ಎಸಗುವಂತಹ ಪ್ರವೃತ್ತಿಯವರಲ್ಲ. ಅವರು ಸ್ವಂತ ಹೆಂಡತಿಯನ್ನೇ ಮುಟ್ಟಿಲ್ಲ. ಹೀಗಿರುವಾಗ ಪರ ಸ್ತ್ರೀಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರಲು ಹೇಗೆ ಸಾಧ್ಯ ಎಂದು ಲಕ್ಷ್ಮಿ ಪ್ರೆಶ್ನಿಸಿದರು.

(ಅಸಾರಾಮ್ ಬಾಪು ಹೆಂಡತಿಯನ್ನು ಮುಟ್ಟಿಯೇ ಇಲ್ಲ ಎಂದಾದರೆ, ಅವರಿಗೆ ೨ ಮಕ್ಕಳು ಹೇಗಾದವು ಎಂಬುದು ಪ್ರೆಶ್ನೆ)

ಅಸಾರಾಮ್ ಬಾಪು ವಿರುದ್ಧ ಈಗಾಗಲೇ ಹಲವಾರು ದೂರುಗಳು ಕೇಳಿ ಬಂದಿದ್ದು, ನಿತ್ಯವೂ ಒಂದೊಂದು ಕಾಮ ಪುರಾಣಗಳು ಹೊರ ಬೀಳುತ್ತಿವೆ. ಈಗಾಗಲೇ ಲೈಂಗಿಕ ದೌರ್ಜನ್ಯ ಆರೋಪದಿಂದಾಗಿ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿದ್ದು, ಅಸಾರಾಮ್ ಬಾಪುಗೆ ಜೈಲೇ ಗತಿ ಎಂಬುದಾಗಿ ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ