ಅಸಾರಾಮ್ ಆಯ್ತು: ಇದೀಗ ಬಾಬಾ ರಾಮದೇವ್ ವಸತಿ ನಿಲಯದಿಂದ ಯುವತಿ ನಾಪತ್ತೆ

ಸೋಮವಾರ, 25 ನವೆಂಬರ್ 2013 (12:26 IST)
PTI
ಯೋಗ ಗುರು ಬಾಬಾ ರಾಮದೇವ್ ಸಂಸ್ಥಾಪಿತ ಪತಂಜಲಿ ವಿಶ್ವವಿದ್ಯಾಲಯದಿಂದ 18 ವರ್ಷ ವಯಸ್ಸಿನ ಯುವತಿಯೊಬ್ಬಳು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಂಜಲಿ ವಿಶ್ವವಿದ್ಯಾಲಯದಲ್ಲಿ ಯೋಗಾ ಸೈನ್ಸ್ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಗುರುವಾರದಿಂದ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಆರ್‌.ಕೆ.ಸಕ್ಲಾನಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ಕುಟುಂಬದ ಸದಸ್ಯರು ಮತ್ತು ವಸತಿ ನಿಲಯದ ಅಧಿಕಾರಿಗಳು ನಿನ್ನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿಯ ಗೆಳತಿಯರನ್ನು ವಿಚಾರಣೆ ನಡೆಸಿದಾಗ ಹಾಸ್ಟೇಲ್‌ಗೆ ಭೇಟಿ ನೀಡುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಅಪಹರಿಸಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ