ಅಸಾರಾಮ್, ನಾರಾಯಣ್ ಸಾಯಿ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು

ಸೋಮವಾರ, 7 ಅಕ್ಟೋಬರ್ 2013 (16:41 IST)
PTI
ಸ್ವಂಘೋಷಿತ ‘ದೇವಮಾನವ’ ಅಸಾರಾಮ್ ಬಾಪು ಮತ್ತು ಅವರ ಮಗ ನಾರಾಯಣ ಸಾಯಿ ಅವರ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

ಅಸಾರಾಮ್‌ ಮತ್ತು ನಾರಾಯಣ ಅವರು ಇಬ್ಬರು ಸಹೋದರಿಯರನ್ನು 2001ರಿಂದ 2006ರ ನಡುವೆ ಅಕ್ರಮವಾಗಿ ಬಂಧನದಲ್ಲಿಟ್ಟು, ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಲಾಗಿದ್ದು, ಈ ಕುರಿತು ಇಲ್ಲಿನ ಜಾಂಗಿರ್‌‌ಪುರ ಪೊಲೀಸ್‌ ಠಾಣೆಯಲ್ಲಿ ಎರಡು ದೂರು ದಾಖಲಾಗಿವೆ ಎಂದು ಸೂರತ್‌ನ ಪೊಲೀಸ್ ಕಮೀಷನ್ ರಾಕೇಶ್‌ ಅಸ್ಥಾನಾ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಶೀಘ್ರದಲ್ಲೇ ಪೊಲೀಸರು ನಾರಾಯಣ ಸಾಯಿ ಅವರ ವಿಚಾರಣೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪದಡಿ 75ವರ್ಷದ ಅಸಾರಾಮ್‌ ಬಾಪು ಅವರನ್ನು ಬಂಧಿಸಿ, ರಾಜಸ್ತಾದ ಜೋಧ್‌ಪುರ ಕಾರಾಗೃಹದಲ್ಲಿ ಇರಿಸಲಾಗಿದೆ.

ವೆಬ್ದುನಿಯಾವನ್ನು ಓದಿ