ಆಂಧ್ರ ಬಸ್‌ ಬೆಂಕಿ ಅನಾಹುತ : ಬೆಂಗಳೂರಿಗರು ಸೇರಿ 42 ಜನರ ದುರ್ಮರಣ

ಬುಧವಾರ, 30 ಅಕ್ಟೋಬರ್ 2013 (10:45 IST)
PR
PR
ಆಂಧ್ರದಲ್ಲಿ ಸಂಭವಿಸಿದ ಭಾರೀ ಬಸ್‌ ಅಗ್ನಿ ಅನಾಹುತದಿಂದಾಗಿ ಖಾಸಗೀ ವೋಲ್ವೊ ಬಸ್ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ. ಪರಿಣಾಮವಾಗಿ ಬಸ್ಸಿನೊಳಗಿದ್ದ 42 ಮಂದಿ ಸಜೀವವಾಗಿ ಸುಟ್ಟುಕರಕಲಾಗಿದ್ದಾರೆ. ಈಗಾಗಲೇ 40 ಕ್ಕೂ ಹೆಚ್ಚು ಮೃತ ದೇಹಗಳನ್ನು ಬಸ್ಸಿನಿಂದ ಹೊರತೆಗೆಯಲಾಗಿದ್ದು, ಇನ್ನುಳಿದ ಶವಗಳು ಬಸ್ಸಿನ ಒಳಗಡೆ ಇದ್ದು, ಶವಗಳು ಗುರುತು ಸಿಗಲಾರದಷ್ಟು ಸುಟ್ಟು ಕರಕಲಾಗಿವೆ.

ನಿನ್ನೆ ರಾತ್ರಿ ಕಲಾಸಿಪಾಳ್ಯಂನಿಂದ ಹೈದರಾಬಾದಿಗೆ ಹೊರಟಿದ್ದ ಜಬ್ಬಾರ್ ಟ್ರಾವೆಲ್ಸ್ ಸಂಸ್ಥೆಯ ವೋಲ್ವೋ ಬಸ್ಸು ಇಂದು ಬೆಳಗಿನ ಜಾವ 5.20ರ ಸಮಯದಲ್ಲಿ ಅಗ್ನಿಗೆ ಆಹುತಿಯಾಗಿದೆ. ಇದರಿಂದ ಸುಮಾರು 42 ಮಂದಿ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿದ್ದವರು ಹೆಚ್ಚಾಗಿ ಬೆಂಗಳೂರಿನವರೇ ಆಗಿದ್ದಾರೆ.

ಹೇಗಾಯ್ತು ಈ ಬಸ್‌ ಅವಘಡ..? ಮುಂದಿನ ಪುಟದಲ್ಲಿದೆ ಇನ್ನಷ್ಟು ಮಾಹಿತಿ...

PR
PR
ಜಬ್ಬಾರ್ ಟ್ರಾವೆಲ್ಸ್ ಗೆ ಸೇರಿದ ಖಾಸಗೀ ವೋಲ್ವೋ ಬಸ್‌ ಆಂಧ್ರದ ಮೆಹಬೂಬ್‌ ನಗರ ಸಮೀಪಿಸುತ್ತಿದ್ದಂತೆ ಈ ದುರ್ಘಟನೆ ನಡೆದಿದೆ. ಆಂಧ್ರದ ಮೆಹಬೂಬ್ ನಗರ ಜಿಲ್ಲೆಯ ಪಲ್ಲಂ ಗ್ರಾಮದ ಬಳಿಯಲ್ಲಿ ಮುಂದೆ ಹೋಗುತ್ತಿದ್ದ ಮತ್ತೊಂದು ವಾಹನವನ್ನು ವೋಲ್ವೋ ಬಸ್ ಚಾಲಕ ಓವರ್‌ಟೆಕ್‌ ಮಾಡಲು ಯತ್ನಿಸಿದ್ದಾನೆ. ಇದರಿಂದ ನಿಯಂತ್ರಣ ತಪ್ಪಿದ್ದರಿಂದ ಬಸ್‌ ರೋಡ್‌ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಟಯರ್‌ ಬ್ಲಾಸ್ಟ್‌ ಆಗಿದ್ದರಿಂದ ತಕ್ಷಣವೇ ಬಸ್‌ಗೆ ದಿಢೀರ್‌ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ ಜನರು ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಪ್ರಯಾಣಿಕರನ್ನು ಆಹುತಿ ತೆಗೆದುಕೊಂಡಿದೆ.

ಬಸ್ಸಿನಲ್ಲಿ ಒಟ್ಟು 49 ಮಂದಿ ಪ್ರಯಾಣಿಕರಿದ್ದರು. ಗಾಯಗೊಂಡ 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಯಾಜ್ (ಕ್ಲೀನರ್), ಫಿರೋಜ್ ಷಾ (ಡ್ರೈವರ್), ಯೋಗೇಶ್ (ಬೆಂಗಳೂರು), ಶ್ರೀಕರ್ ರೆಡ್ಡಿ (ಹೈದರಾಬಾದ್), ರಾಜೇಶ್ (ಹೈದರಾಬಾದ್), ಜೈಸಿಂಗ್ (ಯುಪಿ) ಮತ್ತು ಮುಝಫರ್ (ಬೆಂಗಳೂರು) ಜೀವ ಉಳಿಸಿಕೊಂಡಿದ್ದು, ಇವರನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ