ಆಂಧ್ರ ಬಸ್ ದುರಂತ: ತಾಯಿಯ ಮೊಬೈಲ್ ಕರೆ ಪುತ್ರನನ್ನು ಬದುಕುಳಿಸಿತು

ಗುರುವಾರ, 31 ಅಕ್ಟೋಬರ್ 2013 (13:36 IST)
PTI
ಸಯ್ಯದ್ ಅಜರುದ್ದೀನ್ ಬೆಂಗಳೂರಿನಿಂದ ಹೈದ್ರಾಬಾದ್‌ಗೆ ತೆರಳಲು ಮಂಗಳವಾರದಂದು ರಾತ್ರಿ 8.30 ಕ್ಕೆ ಜಬ್ಬಾರ್ ಟ್ರಾವೆಲ್ಸ್‌ನಿಂದ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿ ಸೀಟ್‌ನಲ್ಲಿ ಆಸೀನರಾಗಿದ್ದರು.

ಅದೇ ಸಮಯದಲ್ಲಿ ಅವರ ತಾಯಿ ಕರೆ ಮಾಡಿ ಕುಟುಂಬದಲ್ಲಿ ತುರ್ತು ಸಮಸ್ಯೆಯಿರುವುದರಿಂದ ಎರಡು ದಿನಗಳ ನಂತರ ಹೈದ್ರಾಬಾದ್‌ಗೆ ಹೋಗುವಂತೆ ಕೋರಿದರು. ಅಜರುದ್ದೀನ್ ತಾಯಿ ಕರೆಗೆ ಓಗೊಟ್ಟು ಟಿಕೆಟ್ ರದ್ದುಗೊಳಿಸಿ ಮನೆಗೆ ವಾಪಸ್ಸಾದರು.

ಒಂದು ವೇಳೆ ತಾಯಿ ಕರೆ ಮಾಡದಿದ್ದಲ್ಲಿ ಆಂಧ್ರದ ಮೆಹಬೂಬ್‌ನಗರದಲ್ಲಿ ನಡೆದ ಬಸ್ ದುರಂತದಲ್ಲಿ ಅವರು ಅಗ್ನಿಗೆ ಸಜೀವ ಆಹುತಿಯಾಗಿರುತ್ತಿದ್ದರು.

ಆದರೆ, ಅವರ ಸಹೋದರಿ ಜಾಬೀನ್ ಮತ್ತು ಆಕೆಯ ಪತಿ ಅಜಮತ್ತುಲ್ಲಾ ಮತ್ತು ಅವರ ಪುತ್ರಿ ಉಸ್ಮಾ ಅದೃಷ್ಠಶಾಲಿಗಳಾಗಿರಲಿಲ್ಲ. ಅವರು ಹೈದ್ರಾಬಾದ್‌ಗೆ ಪ್ರಯಾಣ ಬೆಳೆಸಿ ಮೆಹಬೂಬ್ ನಗರದ ಬಳಿ ಸಜೀವವಾಗಿ ದಹನವಾದರು.

ನಾನು ಬಸ್‌ನ ಸಿ-10 ಸೀಟ್‌ನಲ್ಲಿ ಆಸೀನನಾಗಿದ್ದೆ. ಆ ಸಂದರ್ಭದಲ್ಲಿ ನನ್ನ ತಾಯಿ ಕರೆ ಮಾಡಿ ಎರಡು ದಿನಗಳ ನಂತರ ಹೈದ್ರಾಬಾದ್‌ಗೆ ಹೋಗುವಂತೆ ಕೋರಿದರು. ತಾಯಿ ಕರೆ ಮಾಡದಿದ್ದಲ್ಲಿ ಇಂದು ನಾನು ಜೀವಂತವಾಗಿರುತ್ತಿರಲಿಲ್ಲ. ತಾಯಿಗೆ ಮತ್ತು ಆ ದೇವರಿಗೆ ಧನ್ಯವಾದಗಳು. ತಾಯಿಗೆ ಕೋರಿಕೆಯನ್ನು ಮೊದಲು ತಿರಸ್ಕರಿಸಿದೆ. ಆದರೆ, ಕೊನೆಗೆ ಹೆಚ್ಚು ಒತ್ತಾಯಿಸಿದಾಗ ಬಸ್‌ನಿಂದ ಕೆಳಗಿಳಿದು ಮನೆಗೆ ತೆರಳಿದೆ ಎಂದು ಸಯ್ಯದ್ ಅಜರುದ್ದೀನ್ ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ