ಆಂಧ್ರ ವಿಭಜನೆ ಬೇಡ: ಪ್ರಧಾನಿ, ರಾಷ್ಟ್ರಪತಿಗೆ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಒತ್ತಾಯ

ಶನಿವಾರ, 26 ಅಕ್ಟೋಬರ್ 2013 (17:00 IST)
PTI
ರಾಜ್ಯಾಧ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಭಜನೆ ಬೇಡ ಎಂದು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಒತ್ತಾಯಿಸಿದ್ದಾರೆ.

ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಕೇಂದ್ರ ಸರಕಾರದ ಅವಸರದ ನಿರ್ಧಾರದಿಂದ ಜನತೆ ಆಕ್ರೋಶಗೊಂಡಿದ್ದು, ರಾಜ್ಯದ ವಿಧಾನಸಭೆ ಸದನದಲ್ಲಿ ಮಸೂದೆಯನ್ನು ಮಂಡಿಸುವವರೆಗೆ ಮತ್ತಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದಾರೆ.

ಉನ್ನತಾಧಿಕಾರ ಸಚಿವರ ಸಮಿತಿ ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆಯ ಕಾರ್ಯವಿಧಾನಗಳ ಬಗ್ಗೆ ಅಧ್ಯಯನ ನಡೆಸುತ್ತಿರುವಂತೆ, ನಮ್ಮ ಭಾವನೆಗಳಿಗೆ ಗೌರವ ನೀಡಿ ಆಂಧ್ರಪ್ರದೇಶವನ್ನು ವಿಭಜಿಸದಂತೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದು ಒತ್ತಾಯಿಸುತ್ತಿದ್ದಾರೆ.

ಕೇಂದ್ರ ಸರಕಾರ ರಾಜ್ಯದ ಬಹುಜನತೆಯ ಅನಿಸಿಕೆಗಳಿಗೆ ಸ್ಪಂದಿಸಿ ಒಮ್ಮತದ ನಿರ್ಧಾರಕ್ಕೆ ಪ್ರತ್ಯೇಕ ರಾಜ್ಯವನ್ನು ಘೋಷಿಸಲು ಹೊರಟಿರುವುದು ಆಂಧ್ರ ಜನತೆಗೆ ಆತಂಕ ಮೂಡಿಸಿದೆ ಎಂದು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ