ಆನ್‌‌ಲೈನ್ ಸರ್ಚ್‌ನಲ್ಲಿ ನರೇಂದ್ರ ಮೋದಿಯೇ ಸಿಂಗ್ ಇಸ್ ಕಿಂಗ್

ಶುಕ್ರವಾರ, 22 ನವೆಂಬರ್ 2013 (18:12 IST)
PTI
ಒಂದು ವೇಳೆ ಆನ್‌ಲೈನ್‌ನಲ್ಲಿ ಬೆಂಬಲಿಸುವ ಅಥವಾ ಚರ್ಚಿಸುವ ಬೆಂಬಲಿಗರ ಬಗ್ಗೆ ಚುನಾವಣೆಗಳು ನಡೆದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುತ್ತಿದ್ದರು ಎಂದು ಆನ್‌ಲೈನ್ ಅಧ್ಯಯನ ವರದಿ ಬಹಿರಂಗಪಡಿಸಿದೆ.

ದೇಶದ ಆನ್‌ಲೈನ್‌ ಬೆಂಬಲಿಗರ ಸಂಖ್ಯೆಯಲ್ಲಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ತದನಂತರದ ಸ್ಥಾನವನ್ನು ಮನಮೋಹನ್ ಸಿಂಗ್, ನಾಲ್ಕನೇ ಸ್ಥಾನದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಐದನೇ ಸ್ಥಾನದಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಸ್ಥಾನ ಪಡೆದಿದ್ದಾರೆ.

ಪಾಟ್ನಾದಲ್ಲಿ ನಡೆದ ಮೋದಿಯ ಸಾರ್ವಜನಿಕ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಮೋದಿಯನ್ನು ಬೆಂಬಲಿಸಿದ್ದರು. ಕಲ್ಲಿದ್ದಲು ಹಗರಣದಲ್ಲಿ ನಾನು ಕಾನೂನಿಗಿಂತ ದೊಡ್ಡವನಲ್ಲ ಯಾವುದೇ ರೀತಿಯ ಸಿಬಿಐ ತನಿಖೆಗೆ ಸಿದ್ದ ಎಂದು ಪ್ರಧಾನಿ ನೀಡಿರುವ ಹೇಳಿಕೆಗೆ ಆನ್‌ಲೈನ್‌ನಲ್ಲಿ ಬಾರಿ ಬೆಂಬಲ ದೊರಕಿತ್ತು.

ದೇಶದ 187 ಸಂಸದರು ಮತ್ತು ಸಚಿವರು ಭ್ರಷ್ಟಾಚಾರ, ಜಾತಿ, ಧರ್ಮ, ಯುವಜನತೆ ಮತ್ತು ನಿರುದ್ಯೋಗ ಹಾಗೂ ರಕ್ಷಣಾ ಮತ್ತು ವಿದೇಶಾಂಗ ನೀತಿಗಳ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚಿಸುತ್ತಾರೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ.

ವೆಬ್ದುನಿಯಾವನ್ನು ಓದಿ