ಆಮ್ ಆದ್ಮಿ ಸಚಿವರ ರೇಡ್ : ಟಾಯ್ಲೆಟ್‌ಗೆ ಹೋಗೋದಕ್ಕೂ ಮಹಿಳೆಗೆ ಬಿಡ್ಲಿಲ್ಲವಂತೆ

ಶನಿವಾರ, 18 ಜನವರಿ 2014 (12:59 IST)
PR
PR
ನವದೆಹಲಿ: ದೆಹಲಿ ಕಾನೂನು ಸಚಿವ ಸೋಮನಾಥ್ ಭಾರ್ತಿ ತಮ್ಮ ಕ್ಷೇತ್ರದಲ್ಲಿ ಮಾದಕವಸ್ತು ಮತ್ತು ಸೆಕ್ಸ್ ಜಾಲದ ಮೇಲೆ ರೇಡ್ ಮಾಡಿ ಎಂದು ಪೊಲೀಸರಿಗೆ ಆದೇಶ ನೀಡಿದಾಗ ಪೊಲೀಸರು ನಿರಾಕರಿಸಿದ್ದರು. ತಮ್ಮ ಬಳಿ ವಾರಂಟ್ ಇಲ್ಲ. ಕಾನೂನನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದರು.ಆಗ ಸಚಿವರು ಕೆಲವು ನಿವಾಸಿಗಳು, ಬೆಂಬಲಿಗರ ಜತೆ ಸೇರಿಕೊಂಡು ಉಗಾಂಡಾಗೆ ಸೇರಿದ ನಾಲ್ವರು ಮಹಿಳೆಯರನ್ನು ಬಂಧಿಸಿದರು. ಕನಿಷ್ಠ ಇಬ್ಬರಿಗೆ ಆಸ್ಪತ್ರೆಗೆ ಹೋಗಿ ಡ್ರಗ್ ಪರೀಕ್ಷೆ ನಡೆಸುವಂತೆ ಬಲಪ್ರಯೋಗ ಮಾಡಿದ್ದರು.

ಅದಕ್ಕೆ ಮುಂಚೆ, ಅವರ ಪೈಕಿ ಒಬ್ಬ ಮಹಿಳೆಗೆ ಶೌಚಾಲಯಕ್ಕೆ ಹೋಗಲೂ ಬಿಡದೇ ಸಾರ್ವಜನಿಕ ಸ್ಥಳದಲ್ಲೇ ಮೂತ್ರವಿಸರ್ಜನೆ ಮಾಡಬೇಕಾಯಿತು ಎಂದು ಖ್ಯಾತ ವಕೀಲ ಹರೀಶ್ ಸಾಲ್ವೆ ಹೇಳಿದ್ದಾರೆ. ಅಜ್ಞಾತ ವ್ಯಕ್ತಿಗಳ ವಿರುದ್ಧ ಫೈಲ್ ಮಾಡಿದ ಪೊಲೀಸ್ ಕೇಸ್‌ನಲ್ಲಿ ಅವರು ಮಹಿಳೆಯರನ್ನು ಪ್ರತಿನಿಧಿಸಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆಯರ ಡ್ರಗ್ ಪರೀಕ್ಷೆಯಲ್ಲಿ ನಕಾರಾತ್ಮಕ ಫಲಿತಾಂಶ ಬಂದಿದ್ದು, ಮಹಿಳೆಯರನ್ನು ಅಕ್ರಮವಾಗಿ ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆಂದು ಸಚಿವರ ವಿರುದ್ಧ ಆರೋಪ ಹೊರಿಸಲಾಗಿದೆ.

ಎಎಪಿ ನಾಯಕ ಅಶುತೋಷ್ ತಮ್ಮ ಸಚಿವ ಭಾರ್ತಿ ವಹಿಸಿ ಮಾತನಾಡಿ, ತಮ್ಮ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಕಂಕಣಬದ್ಧರಾದ ಸಚಿವರನ್ನು ಹೊಗಳುವ ಬದಲಿಗೆ ಜನರು ಅವರನ್ನು ತೆಗಳುವ ಪ್ರಯತ್ನ ಮಾಡಿದ್ದಾರೆಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ