ಆರೆಸ್ಸೆಸ್‌ನಿಂದ ಬಾಂಬ್ ತಯಾರಿಕೆ ತರಬೇತಿ: ದಿಗ್ವಿಜಯ್ ಸಿಂಗ್

ಗುರುವಾರ, 25 ಜುಲೈ 2013 (17:23 IST)
PTI
ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರುದ್ಧ ನಿರಂತರ ವಾಗ್ದಾಳಿಗೆ ಖ್ಯಾತರಾಗಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಇದೀಗ ಆರೆಸ್ಸೆಸ್ ಬಾಂಬ್ ತಯಾರಿಕೆ ತರಬೇತಿ ನೀಡುತ್ತಿದೆ ಎಂದು ಆರೋಪಿಸಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಈ ಹಿಂದೆ ನಡೆದ ಕೆಲ ಘಟನೆಗಳನ್ನು ಆಧರಿಸಿ, ಆರೆಸ್ಸೆಸ್ ಬಾಂಬ್ ತಯಾರಿಕೆ ತರಬೇತಿ ನೀಡುತ್ತಿದೆ ಎಂದು ಆರೋಪಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ 1992ರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಆರೆಸ್ಸೆಸ್ ಕಚೇರಿಯಲ್ಲಿ ಬಾಂಬ್‌ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತನಾಗಿದ್ದನು ಎಂದು ಹಳೆಯ ಘಟನೆಗಳನ್ನು ಮೆಲಕು ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷ 1993ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಖರ್ಗಾಂವ್‌ನಲ್ಲಿರುವ ಕೇಸರಿ ಪಡೆ ಬೆಂಬಲಿತ ಶಾಲಾ ಪ್ರಿನ್ಸಿಪಾಲ್‌ನನ್ನು ಬಂಧಿಸಲಾಗಿತ್ತು ಎಂದು ವಿವರಣೆ ನೀಡಿದ್ದಾರೆ.

ಕಳೆದ 2004ರಲ್ಲಿ ಮೊಹೊ ಜಿಲ್ಲೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂದಿತನಾದ ಆರೋಪಿಯೊಬ್ಬ ಆರೆಸ್ಸೆಸ್ ಸಂಘಟನೆ ಬಾಂಬ್ ತಯಾರಿಕೆ ತರಬೇತಿ ನೀಡುತ್ತಿದೆ ಎನ್ನುವ ಆಘಾತಕಾರಿ ಮಾಹಿತಿ ನೀಡಿದ್ದನು ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ