ಆಸ್ಟ್ರೇಲಿಯಾ:ಹನೀಫ್ ಸಹವರ್ತಿ ಅಮಾನತು

ಮಂಗಳವಾರ, 31 ಜುಲೈ 2007 (13:37 IST)
ಉಗ್ರಗಾಮಿ ಚಟುವಟಿಕೆಗಳಿಗಾಗಿ ಭಾರತೀಯ ವೈದ್ಯರತ್ತ ಸಂಶಯಾಧರಿತ ಚಟುವಟಿಕೆ ಮುಂದುವರಿಸಿರುವ ಆಸ್ಟ್ರೇಲಿಯಾ ಆಡಳಿತ ಸಂಸ್ಥೆಗಳು ಹನೀಫ್‌ರ ಸಹವರ್ತಿ ವೈದ್ಯನನ್ನು ನೌಕರಿಯಿಂದ ಅಮಾನತುಗೊಳಿಸಿದೆ.

ಭಾರತೀಯ ಮೂಲದ ವೈದ್ಯ ಡಾ. ಮೊಹಮ್ಮದ್ ಅಸೀಫ್ ಆಲಿ (26)ಯನ್ನು ಪರಿಹಾರ ಕ್ರಮಗಳಿಲ್ಲದೇ, ಗೋಲ್ಡ್ ಕೋಸ್ಟ್ ಆಸ್ಪತ್ರೆಯ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‌ ಆರೋಗ್ಯ ಕಾರ್ಯದರ್ಶಿ ಉಸ್ಚಿ ಶೆರಿಬರ್ ತಿಳಿಸಿದ್ದಾರೆ.

ಆಲಿಯು ಮೈಸೂರು ವಿಶ್ವವಿದ್ಯಾನಿಲಯದ ಅಧೀನ ವೈದ್ಯಕೀಯ ಪದವಿ ಪಡೆದಿದ್ದು, ಇದರಲ್ಲೇನೂ ಸಂಶಯವಿಲ್ಲ, ಆತ ನುರಿತ ವೈದ್ಯಆಗಿರಬಹುದು, ಆದರೆ ಇನ್ನಿತರ ಮಾಹಿತಿಗಳು ನಕಲಿ ಎನ್ನಲಾಗಿದೆ. ಆಲಿ 2001ರಲ್ಲಿ ವೈದ್ಯ ಪದವಿ ಪಡೆದಿದ್ದರು.

ಕ್ವೀನ್ಸ್ ಲ್ಯಾಂಡ್‌ನ ಪೊಲೀಸರು ನೀಡಿರುವ ಮಾಹಿತಿಯಂತೆ ಈ ಅಮಾನತುಕಾರ್ಯ ನಡೆದಿದೆ. ಆಲಿ ನೀಡಿರುವ ದಾಖಲೆ ಪತ್ರಗಳಲ್ಲಿ ಆತ ಭಾರತದಲ್ಲಿ 12 ತಿಂಗಳ ಕಾಲ ನೌಕರಿ ನಿರ್ಮಿಸಿದ ಮಾಹಿತಿ ಇದೆ, ಇದೂ ಸೇರಿದಂತೆ ಹಲವು ವಿವರಗಳು ನಕಲಿ ಎಂದು ಆಡಳಿತ ಆರೋಪಿಸಿದೆ.

ಆಲಿಯ ಪ್ರಕರಣವನ್ನು ಸದ್ಯ ಅಪರಾಧ ಹಾಗೂ ದುರ್ವ್ಯವಹಾರ ನಿಯಂತ್ರಣ ಆಯೋಗದ ಸುಪರ್ದಿಗೆ ನೀಡಲಾಗಿದೆ. ಸುದ್ದಿ ಸಂಸ್ಥೆ ವರದಿ ಪ್ರಕಾರ ಆಲಿಗೆ ವೈದ್ಯಕೀಯದಲ್ಲಿ ಮುಂದುವರಿಯಲು ಯಾವುದೇ ಅಡಚಣೆ ಇಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ