ಇಂದು ವಾಜಪೇಯಿ ಜನ್ಮದಿನಾಚರಣೆ

ಶುಕ್ರವಾರ, 25 ಡಿಸೆಂಬರ್ 2009 (17:13 IST)
PTI
ಇಂದು ಮಹಾನ್ ಮುತ್ಸದ್ದಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ.1924 ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲೀಯರ್‌ನಲ್ಲಿ ಜನ್ಮತಾಳಿದರು.

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ವಾಜಪೇಯಿ ಸುಮಾರು 50 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.

ಗ್ವಾಲೀಯರ್‌ನ ಲಕ್ಷ್ಮಿಬಾಯಿ ಕಾಲೇಜ್‌ನಲ್ಲಿ ಪಾಲಿಟಿಕಲ್ ಸೈನ್ಸ್‌ನಲ್ಲಿ ತಮ್ಮ ಮಾಸ್ಟರ್ ಡಿಗ್ರಿಯನ್ನು ಪೂರೈಸಿದರು. ಕವಿತೆ ರಚನಾಕಾರರಾಗಿ ಉತ್ತಮ ಹೆಸರುಗಳಿಸಿದರು.

1942-45ರ ಅವಧಿಯಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ವಾಜಪೇಯಿ ಆರಂಭದಲ್ಲಿ ಕಮ್ಯೂನಿಸ್ಟ್ ಪರವಾಗಿದ್ದರು. ನಂತರ ನಿಧಾನವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದತ್ತ ವಾಲಿದರು.

ಸುಮಾರು 50 ವರ್ಷಗಳವರೆಗೆ ಸಂಸದರಾಗಿ ಸಚಿವರಾಗಿ ಸೇವೆ ಸಲ್ಲಿಸಿದರೂ ಭ್ರಷ್ಟಚಾರದಿಂದ ದೂರವಿದ್ದು, ಮೌಲ್ಯಾಧಾರಿತ, ಅಪರೂಪದ ರಾಜಕಾರಣಿ ಎನ್ನುವ ಹೊಗಳಿಕೆಗೆ ಕಾರಣರಾದರು.

1996ರಲ್ಲಿ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿ ನಂತರ 1998 ಅಕ್ಚೋಬರ್ 13 ರಿಂದ 2004 ಮೇ.19 ರವರೆಗೆ ಎರಡನೇ ಬಾರಿಗೆ ಪ್ರಧಾನಿಯಾಗುವ ಅವಕಾಶ ಗಿಟ್ಟಿಸಿದರು.

ವೆಬ್ದುನಿಯಾವನ್ನು ಓದಿ