ಇಂದು ವಿದಿಶಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿರುವ ಸುಷ್ಮಾ ಸ್ವರಾಜ್

ಶುಕ್ರವಾರ, 4 ಏಪ್ರಿಲ್ 2014 (13:04 IST)
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಶುಕ್ರವಾರ ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
PTI

2009 ರ ಲೋಕಸಭೆಯಲ್ಲಿ ಹಿರಿಯ ನಾಯಕ ಆಡ್ವಾಣಿ ಪ್ರತಿಪಕ್ಷ ನಾಯಕ ಹುದ್ದೆಯನ್ನು ತೆರವುಗೊಳಿಸಿದ್ದ ಸ್ಥಾನದಲ್ಲಿ ಸುಷ್ಮಾ ಮುಂದುವರೆಯುತ್ತಿದ್ದಾರೆ.

ಬಿಜೆಪಿ ಸಂಸದೆಯ ವಿರುದ್ಧ ಕಾಂಗ್ರೆಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸಹೋದರ ಲಕ್ಷ್ಮಣ ಸಿಂಗ್‌ರನ್ನು ಕಣಕ್ಕಿಳಿಸಿದೆ.

ಪ್ರಧಾನಿಯಂತಹ ಉನ್ನತ ಹುದ್ದೆಗೆ ನರೇಂದ್ರ ಮೋದಿಗಿಂತ ಸ್ವರಾಜ್ ಉತ್ತಮ ಅಭ್ಯರ್ಥಿ ಎಂದು ಕಳೆದ ತಿಂಗಳು ದಿಗ್ವಿಜಯ್ ಹೇಳಿಕೆ ನೀಡಿದ್ದರು.

"ನಾನು ಅನೇಕ ಕಾರಣಗಳಿಂದ ನೋಡಲಾಗಿ ಪ್ರಧಾನಿ ಹುದ್ದೆಗೆ ಮೋದಿಗಿಂತ ಸುಷ್ಮಾ ಹೆಚ್ಚು ಸೂಕ್ತರು ಎಂಬುದು ನನ್ನ ಅಭಿಪ್ರಾಯ" ಎಂದು ಸಿಂಗ್ ವರದಿಗಾರರಲ್ಲಿ ಹೇಳಿಕೊಂಡಿದ್ದರು.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸುಷ್ಮಾ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ. ಅವರು ಕಳೆದ ವರ್ಷ ಪಕ್ಷದ ಅಭ್ಯರ್ಥಿಯಾಗಿ ನರೇಂದ್ರ ಮೋದಿ ನೇಮಕಾತಿಗೆ ವಿರೋಧಿಸಿದ್ದರು. ಬಿಜೆಪಿ ನೇತೃತ್ವದ ಎನ್‌ಡಿಎ ಮುಂಬರುವ ಚುನಾವಣೆಗಳಲ್ಲಿ ಮಾಂತ್ರಿಕ ಅಂಕಿ ಪಡೆಯಲು ವಿಫಲವಾದರೆ, ಸುಷ್ಮಾ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೆಸರಿಸಲ್ಪಡುವ ಸಂಭವವಿದೆ ಎಂದು ನಂಬಲಾಗಿದೆ.

ವೆಬ್ದುನಿಯಾವನ್ನು ಓದಿ