' ಈ ದೇಶದಲ್ಲಿ ಹುಡುಗಿಯಾಗಿ ಹುಟ್ಟುವುದೇ ಅಪರಾಧ'

ಸೋಮವಾರ, 31 ಮಾರ್ಚ್ 2014 (15:38 IST)
ನವದೆಹಲಿ: ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣದ ಕುರಿತು ಮೊದಲ ತೀರ್ಪು ಹೊರಬಿದ್ದಿದೆ. ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗಿಯಾದ ಅತಿ ಕಿರಿಯ ವಯಸ್ಸಿನ ಆರೋಪಿಗೆ ಸುಧಾರಣೆ ಕೇಂದ್ರದಲ್ಲಿ ಮೂರು ವರ್ಷಗಳ ಶಿಕ್ಷೆಯನ್ನು ಬಾಲಾಪರಾಧಿ ನ್ಯಾಯಾಲಯ ಪ್ರಕಟಿಸುವ ಮೂಲಕ ಅಪ್ರಾಪ್ತ ವಯಸ್ಕ ಬಾಲಕನಿಗೆ ಶಿಕ್ಷೆಯಲ್ಲಿ ರಿಯಾಯಿತಿ ತೋರಿಸಿದೆ. ಅವನು ಅಪರಾಧವೆಸಗಿದಾಗ 18 ವರ್ಷ ತುಂಬಲು ಕೆಲವೇ ತಿಂಗಳು ಬಾಕಿಯಿತ್ತು. ಆದರೆ ಯುವತಿಯ ತಂದೆತಾಯಿಗಳು ಈ ಶಿಕ್ಷೆಯನ್ನು ಕೇಳಿ ಕಂಗಾಲಾದರು. ನಮಗೆ ಮೋಸವಾಗಿದೆ. ಈ ದೇಶದಲ್ಲಿ ಹುಡುಗಿಯಾಗಿ ಹುಟ್ಟುವುದೇ ಅಪರಾಧ ಎಂದು ಬಾಲಕಿಯ ತಂದೆ ಪ್ರತಿಕ್ರಿಯಿಸಿದರು. ಮೇಲಿನ ಕೋರ್ಟ್‌ನಲ್ಲಿ ತೀರ್ಪಿನ ವಿರುದ್ಧ ಅಪೀಲು ಹೋಗುವುದಾಗಿ ತಿಳಿಸಿದರು.

ಬಾಲಕ ಉತ್ತರಪ್ರದೇಶದ ಗ್ರಾಮವೊಂದಕ್ಕೆ ಸೇರಿದ್ದು 11 ವರ್ಷ ವಯಸ್ಸಿನಲ್ಲೇ ಉದ್ಯೋಗ ನಿಮಿತ್ತ ದೆಹಲಿಗೆ ಬಂದಿದ್ದ. ಬಂಧಿತರಾದ ಐವರು ಅಪರಾಧಿಗಳ ಪೈಕಿ ಒಬ್ಬ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ಉಳಿದವರನ್ನು ತ್ವರಿತಗತಿಯ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು, ಗಲ್ಲುಶಿಕ್ಷೆಗೆ ಗುರಿಯಾಗುವ ಸಂಭವವಿದೆ.

ವೆಬ್ದುನಿಯಾವನ್ನು ಓದಿ