ಉಗ್ರರೊಂದಿಗೆ ಕಂದಹಾರ್‌ಗೆ ತೆರಳುವ ಮಾಹಿತಿ ಆಡ್ವಾಣಿಗಿತ್ತು: ಜಸ್ವಂತ್ ಸಿಂಗ್

ಗುರುವಾರ, 31 ಅಕ್ಟೋಬರ್ 2013 (18:40 IST)
PTI
1999 ರಲ್ಲಿ ನಡೆದ ಇಂಡಿಯನ್‌ ಏರ್‌ಲೈನ್ಸ್ ವಿಮಾನ ಅಪಹರಣದಲ್ಲಿ ಒತ್ತೆಯಾಳುಗಳ ಬದಲಿಗೆ ಮೂವರು ಉಗ್ರರೊಂದಿಗೆ ಕಂದಹಾರ್‌ಗೆ ತೆರಳುವ ವಿವಾದಾತ್ಮಕ ನಿರ್ಧಾರ ಅಂದಿನ ಗೃಹ ಸಚಿವ ಎಲ್‌.ಕೆ.ಆಡ್ವಾಣಿಯವರಿಗೆ ಮಾಹಿತಿಯಿತ್ತು ಎಂದು ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಹೇಳಿದ್ದಾರೆ.

ತಾವು ಸ್ವಂತ ತೆಗೆದುಕೊಂಡ ನಿರ್ಧಾರದ ಬಗ್ಗೆ ಸಚಿವ ಸಂಪುಟಕ್ಕೆ ಮಾಹಿತಿ ನೀಡಿದಾಗ ಆಡ್ವಾಣಿ ಮತ್ತು ಅರುಣ್ ಶೌರಿ ವಿರೋಧಿಸಿದ್ದರು ಎಂದು ಸಿಂಗ್ ತಿಳಿಸಿದ್ದಾರೆ.

ಆದರೆ, ಉಗ್ರರೊಂದಿಗೆ ಜಸ್ವಂತ್ ಸಿಂಗ್ ತೆರಳುವ ನಿರ್ಧಾರ ನನಗೆ ತಿಳಿದಿರಲಿಲ್ಲ ಎಂದು ಅಂದಿನ ಗೃಹ ಸಚಿವ ಆಡ್ವಾಣಿ ತಳ್ಳಿಹಾಕಿದ್ದರು.

ಉಗ್ರರೊಂದಿಗೆ ಕಂದಹಾರ್‌ಗೆ ತೆರಳುವ ಬಗ್ಗೆ ನಾನು ಸ್ವಂತ ನಿರ್ಧಾರ ತೆಗೆದುಕೊಂಡಿದ್ದೆ. ನಾನು ಉಗ್ರರೊಂದಿಗೆ ತೆರಳುತ್ತಿದ್ದೇನೆ ಎಂದು ಸಚಿವ ಸಂಪುಟಕ್ಕೆ ಮಾಹಿತಿ ನೀಡಿದ್ದೆ. ಸಂಪುಟ ನನ್ನ ಅನಿಸಿಕೆಗಳಿಗೆ ಯಾವುದೇ ಅಭಿಪ್ರಾಯ ತಿಳಿಸಲಿಲ್ಲ. ಆದ್ದರಿಂದ ಉಗ್ರರೊಂದಿಗೆ ತೆರಳಿದೆ ಎನ್ನುವ ಅಂಶಗಳನ್ನು ಇಂಡಿಯಾ ಎಟ್ ರಿಸ್ಕ್ ಎನ್ನುವ ತಮ್ಮ ಪುಸ್ತಕದಲ್ಲಿ ಜಸ್ವಂತ್ ಸಿಂಗ್ ಉಲ್ಲೇಖಿಸಿದ್ದಾರೆ.

ವೆಬ್ದುನಿಯಾವನ್ನು ಓದಿ