ಉತ್ತರಪ್ರದೇಶದಲ್ಲಿ 1 ಸಾವಿರ ಟನ್ ಚಿನ್ನ ಹುದುಗಿಸಿಡಲಾಗಿದೆಯೇ?

ಮಂಗಳವಾರ, 15 ಅಕ್ಟೋಬರ್ 2013 (13:16 IST)
PTI
ಸಾಧುವೊಬ್ಬರಿಗೆ 1 ಸಾವಿರ ಟನ್ ಹುದುಗಿಸಿಟ್ಟಿರುವ ಬಗ್ಗೆ ಕನಸು ಬಿತ್ತಂತೆ. ತನ್ನ ಕನಸಿನ ಬಗ್ಗೆ ಪುರಾತತ್ವ ಇಲಾಖೆಗೆ ತಿಳಿಸಿದಾಗ ಆ ಸ್ಥಳದ ಅಗತೆಕ್ಕೆ ಇಲಾಖೆ ಮುಂದಾದ ಅಚ್ಚರಿಯ ಘಟನೆ ವರದಿಯಾಗಿದೆ.

ಶೋಬನ್ ಸರ್ಕಾರ್ ಎನ್ನುವ ಸಾಧುವಿಗೆ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯ ದೌಂಡಿಯಾ ಖೇಡ್ ಗ್ರಾಮದಲ್ಲಿರುವ ರಾಜಾ ರಾವ್ ರಾಮ್ ಬುಕ್ಸ್ ಸಿಂಗ್ ಕೋಟೆಯಲ್ಲಿ 1 ಸಾವಿರ ಟನ್ ಚಿನ್ನ ಹಿಂದಿನ ಕಾಲದಲ್ಲಿ ಹುದುಗಿಸಿಟ್ಟ ಬಗ್ಗೆ ಕನಸು ಕಂಡನಂತೆ. ಕೂಡಲೇ ಸಂಬಂಧಪಟ್ಟ ಸಚಿವಾಲಯಕ್ಕೆ ಮಾಹಿತಿ ನೀಡಿ ಚಿನ್ನ ದೊರೆತಲ್ಲಿ ದೇಶದ ಆರ್ಥಿಕತೆ ಚೇತರಿಕೆಗೆ ನೆರವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟನಂತೆ.

ಹಿಂದಿನ ಕಾಲದ ರಾಜರಾಗಿದ್ದ ರಾಜಾ ರಾವ್ ರಾಮ್ ಬುಕ್ಸ್ ಸಿಂಗ್ ಕನಸಿನಲ್ಲಿ ನೂರಾರು ಭಕ್ತರಿರುವ ಸಾಧುವಿನೊಂದಿಗೆ ಮಾತನಾಡಿ,ಕೋಟೆಯಲ್ಲಿ ಹುದುಗಿಸಿಟ್ಟಿರುವ ಚಿನ್ನದ ಬಗ್ಗೆ ಕಾಳಜಿವಹಿಸುವಂತೆ ಹೇಳಿದ್ದಾನೆ ಎಂದು ಸಾಧು ಮಾಹಿತಿ ನೀಡಿದ್ದಾರೆ.

ಗಮನಾರ್ಯಹ ವಿಷಯವೆಂದರೆ, ರಾಜಾ ರಾವ್ ರಾಮ್ ಬುಕ್ಸ್ ಸಿಂಗ್ 1857ರಲ್ಲಿ ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಮೃತರಾಗಿದ್ದರು.

ಶೋಬನ್ ಸರಕಾರ ಕನಸಿನ ಬಗ್ಗೆ ಜಿಲ್ಲಾಡಳಿತವಾಗಲಿ ರಾಜ್ಯ ಸರಕಾರವಾಗಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಏತನ್ಮಧ್ಯೆ, ಕೃಷಿ ಮತ್ತು ಆಹಾರ ಖಾತೆ ಸಚಿವರಾದ ಚರಣ್ ದಾಸ್ ಮಹಾಂತ್, ಸಾಧು ತೋರಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ ಸಾಧುವಿನೊಂದಿಗೆ ಚರ್ಚೆ ನಡೆಸಿ ಕೋಟೆಯ ಅಗೆತ ಆರಂಭಿಸುವಂತೆ ಪುರಾತತ್ವ ಇಲಾಖೆಗೆ ಆದೇಶ ನೀಡಿದ್ದಾರೆ. ಆಕ್ಟೋಬರ್ 18 ರಿಂದ ಇಲಾಖೆ ಕಾರ್ಯ ಆರಂಭಿಸಲಿದೆ.

ಸಾಧು ನೀಡಿದ ಮಾಹಿತಿಯ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನಮಂತ್ರಿ, ವಿತ್ತ ಮಂತ್ರಿ, ಗೃಹ ಸಚಿವ, ಗಣಿ ಸಚಿವ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದಿದ್ದೇನೆ ಎಂದು ಕೃಷಿ ಮತ್ತು ಆಹಾರ ಖಾತೆ ಸಚಿವರಾದ ಚರಣ್ ದಾಸ್ ಮಹಾಂತ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ