ಉತ್ತರಪ್ರದೇಶವನ್ನು 4 ರಾಜ್ಯಗಳಾಗಿ ವಿಭಜಿಸಿ: ಮಾಯಾವತಿ

ಬುಧವಾರ, 31 ಜುಲೈ 2013 (16:31 IST)
PTI
ತೆಲಂಗಾಣ ಪ್ರತ್ಯೇಕ ರಾಜ್ಯ ಘೋಷಣೆಯ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಉತ್ತರಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಂಗಡಿಸಿ ಎಂದು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶವನ್ನು ಪೂರ್ವಾಂಚಲ, ಬುಂದೇಲಖಂಡ್, ಅವಧ್ ಪ್ರದೇಶ ಮತ್ತು ಪಶ್ಚಿಮ ಪ್ರದೇಶ ರಾಜ್ಯಗಳಾಗಿ ಸಣ್ಣ ಸಣ್ಣ ರಾಜ್ಯಗಳನ್ನಾಗಿ ಕೇಂದ್ರ ಸರಕಾರ ಘೋಷಿಸಬೇಕು ಎಂದು ಹೇಳಿದ್ದಾರೆ.

ಕಳೆದ 2012ರ ಚುನಾವಣೆ ಸಂದರ್ಭದಲ್ಲಿ ಮಾಯಾವತಿ ಉತ್ತರಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸಬೇಕು ಎಂದು ಒತ್ತಾಯಿಸಿದ್ದರು. ಇದೀಗ 2014ರಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮತ್ತೆ ರಾಜ್ಯವನ್ನು ವಿಭಜಿಸುವ ಮಂತ್ರದಲ್ಲಿ ತೊಡಗಿದ್ದಾರೆ ಎಂದು ವಿಪಕ್ಷಗಳು ಲೇವಡಿ ಮಾಡಿವೆ.

ಉತ್ತರಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಜಿಸುವುದರಿಂದ ರಾಜ್ಯಗಳ ಅಭಿವೃದ್ಧಿಯಲ್ಲಿ ಚೇತರಿಕೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ