ಉತ್ತರಪ್ರದೇಶ ಸರ್ಕಾರದ ನಿರ್ಲಕ್ಷ್ಯದಿಂದ ಮುಜಾಫರ್‌ನಗರ ಗಲಭೆ: ಸುಪ್ರೀಂಕೋರ್ಟ್ ತೀರ್ಪು

ಬುಧವಾರ, 26 ಮಾರ್ಚ್ 2014 (11:29 IST)
PR
PR
ಲಖನೌ: ಮುಜಾಫರ್‌ನಗರ ಕೋಮು ಗಲಭೆಗೆ ಉತ್ತರಪ್ರದೇಶ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಗಲಭೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಯಾವುದೇ ಆಸಕ್ತಿ ಮತ್ತು ಕಾಳಜಿ ವಹಿಸಲಿಲ್ಲ. ಇದರಿಂದ ಗಲಭೆ ತೀವ್ರ ಸ್ವರೂಪ ಪಡೆಯಿತು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಮುಜಾಫರ್‌ನಗರದ ಜನರ ಮೂಲಭೂತ ಹಕ್ಕು ರಕ್ಷಣೆಗೆ ಸರ್ಕಾರ ವಿಫಲವಾಗಿದೆ. ಆದರೆ ಈ ಹಂತದಲ್ಲಿ ವಿಶೇಷ ತನಿಖಾ ತಂಡ ಅಥವಾ ಸಿಬಿಐ ತನಿಖೆಯನ್ನು ನಡೆಸುವ ಅಗತ್ಯವಿಲ್ಲ ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ.

ಇಬ್ಬರು ಜಾಟರು ಮತ್ತು ಒಬ್ಬ ಮುಸ್ಲಿಮ್ ಹತ್ಯೆ ಬಳಿಕ ಮುಜಾಫರ್‌ನಗರದಲ್ಲಿ ಕೋಮು ಗಲಭೆ ಭುಗಿಲೆದ್ದಿತ್ತು. ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರ ಪ್ರಚೋದನಾಕಾರಿ ಭಾಷಣಗಳಿಂದ ಗಲಭೆ ವಿಕೋಪಕ್ಕೆ ಮುಟ್ಟಿತ್ತು. ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಅಖಿಲೇಶ್ ಯಾದವ್ ಸರ್ಕಾರಕ್ಕೆ ಮುಖಭಂಗವಾಗಿದೆ. ಉತ್ತರಪ್ರದೇಶ ಸರ್ಕಾರಕ್ಕೆ ಗಲಭೆ ಬಗ್ಗೆ ಮಾಹಿತಿ ಇದ್ದರೂ ಯಾಕೆ ಸುಮ್ಮನಿತ್ತು ಎನ್ನುವುದು ಈಗ ಪ್ರಶ್ನೆಯಾಗಿದೆ. ಗಲಭೆಯ ನೈತಿಕ ಹೊಣೆ ಹೊತ್ತು ಅಖಿಲೇಶ್ ರಾಜೀನಾಮೆ ನೀಡುತ್ತಾರೆಯೋ ಇಲ್ಲವೋ ಎಂದು ಕಾದುನೋಡಬೇಕು.

ವೆಬ್ದುನಿಯಾವನ್ನು ಓದಿ