ಉಪ್ಪಿಗಿಂತ ದುಬಾರಿ ಯಾವುದಿಲ್ಲ: ಪ್ರತಿ ಕೇಜಿಗೆ 100 ರೂಪಾಯಿ

ಶುಕ್ರವಾರ, 15 ನವೆಂಬರ್ 2013 (09:55 IST)
PR
ಉತ್ತರ ಭಾರತದಲ್ಲಿ ಉಪ್ಪಿನ ಬೆಲೆ ಗಗನಕ್ಕೆರಿದೆ. ದೇಶದಲ್ಲಿ ಉಪ್ಪು ಮುಗಿದು ಹೊಗುತ್ತದೆ ಎಂಬ ಹುಸಿ ಸುದ್ದಿ ಎಲ್ಲಕಡೆ ಹರಡಿದೆ. ಇದರಿಂದ ಉಪ್ಪಿನ ಬೇಲೆ ಪ್ರತಿ ಕೇಜಿಗೆ 100 ರೂಪಾಯಿ ಆಗಿದೆ.ಈ ರೀತಿ ಗಾಳಿ ಸುದ್ದಿ ಹರಡಿದ ಜನರನ್ನು ಭಂದಿಸಲು ಪೊಲಿಸರು ಹರಸಾಹಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 11 ಜನರನ್ನು ಭಂದಿಸಲಾಗಿದೆ.

ವದಂತಿ ಎಲ್ಲೆಕಡೆ ಹರಡುತ್ತಿದಂತೆ ಜನರು ದುಬಾರಿ ಮೊತ್ತದಿಂದ ಹೆಚ್ಚು ಉಪ್ಪನ್ನು ಖರೀದಿ ಮಾಡಿತ್ತಿದ್ದಾರೆ. ಈ ವದಂತಿ ಎಲ್ಲ ಕಡೆ ಹರಡುತಗತಿದಂತೆ ಬಿಹಾರದ ಆಹಾರ ಮಂತ್ರಿ ಶ್ಯಾಮ ರಜಕ ರಾಜ್ಯದ ಜನರಿಗೆ ಉಪ್ಪು ಖಾಲಿ ಆಗೊದಿಲ್ಲ , ವದಂತಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ