ಎಲ್ಲೆಡೆ ಮಾಯಾ 'ಹಣ ವರ್ಗಾವಣೆ' ಯೋಜನೆ: ನಾಯ್ಡು ಆಗ್ರಹ

ಬುಧವಾರ, 3 ನವೆಂಬರ್ 2010 (16:21 IST)
PTI
ಅರ್ಹ ಬಡವರಿಗೆ ಮಾಸಿಕವಾಗಿ 1000ದಿಂದ 3000 ರೂಪಾಯಿವರೆಗೆ ದೊರೆಯಬಹುದಾದ ಹಣ ವರ್ಗಾವಣೆ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮಾಯಾವತಿ ಸರಕಾರ ಘೋಷಿಸಿರುವ ಈ ಯೋಜನೆ ಅತ್ಯಂತ ಉಪಯುಕ್ತ ಎಂದಿದ್ದಾರೆ.

ಆರ್ಥಿಕ ಸುಧಾರಣೆಗಳಿದಾಗಿ ದೇಶದ ಸಂಪತ್ತು ಹಿಂದೆಂದಿಗಿಂತಲೂ ವೃದ್ಧಿಯಾಗಿದೆ ಎಂಬ ಮಾತನ್ನು ಕೇಂದ್ರದಿಂದ ನಾವು ಕೇಳುತ್ತಿದ್ದೇವೆ. ಮಾಯಾವತಿ ಸರಕಾರವು ಹಣ ವರ್ಗಾವಣೆ ಯೋಜನೆಯನ್ನು ಘೋಷಿಸಿದೆ ಮತ್ತು ಕೇಂದ್ರವು ಕೂಡ ಇದನ್ನು ದೇಶಾದ್ಯಂತ ಜಾರಿಗೆ ತರಬೇಕು, ಬಡವರಿಗೆ ಸಹಾಯ ಮಾಡುವ ಏಕೈಕ ಮಾರ್ಗವಿದು ಎಂದು ಟಿಡಿಪಿ ನಾಯಕ ಹೇಳಿದರು.

ರಂಗಾರೆಡ್ಡಿ ಜಿಲ್ಲೆಗೆ ಮೂರು ದಿನಗಳ ಭೇಟಿಗಾಗಿ ಬಂದಿದ್ದ ಅವರು ಸಮಾವೇಶವೊಂದರಲ್ಲಿ ಮಾತನಾಡುತ್ತಾ, ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ಹಿನ್ನೆಲೆಯಲ್ಲಿ, ಆರ್ಥಿಕ ಯೋಜನೆಗಳ ಕುರಿತು ಗಮನ ಕೇಂದ್ರೀಕರಿಸಿ ಮಾತನಾಡಿದರು. ಟಿಡಿಪಿ ಆಡಳಿತಾವಧಿ ಮತ್ತು ಈಗಿನ ಕಾಂಗ್ರೆಸ್ ಅವಧಿಯಲ್ಲಿ ಬಡವರ ಪರಿಸ್ಥಿತಿಯನ್ನು ಹೋಲಿಸಿದ ಅವರು, ಬಡವರ ಸ್ಥಿತಿ ತೀರಾ ಹದಗೆಟ್ಟಿದೆ ಎಂದರು.

ವೆಬ್ದುನಿಯಾವನ್ನು ಓದಿ