ಎವರೆಸ್ಟ್ ಏರಿ ವಾಪಸು ಬರುವಾಗ 8 ಕೆಜಿ ಕಸದ ರಾಶಿ ತರೋದಕ್ಕೆ ಆದೇಶ

ಸೋಮವಾರ, 3 ಮಾರ್ಚ್ 2014 (18:20 IST)
PR
PR
ನವದೆಹಲಿ: ಬಾಹ್ಯಾಕಾಶದಲ್ಲಿ ಕಸದ ರಾಶಿ ಸೇರಿರುವಂತೆ ಮೌಂಟ್ ಎವರೆಸ್ಟ್‌ನಲ್ಲಿ ಕೂಡ ಕಸದ ರಾಶಿ ಸೇರಿದೆ. ಈಗ ಮೌಂಟ್ ಎವರೆಸ್ಟ್‌ನಿಂದ ಕಸವನ್ನು ಸ್ವಚ್ಛಗೊಳಿಸುವುದು ಸರ್ಕಾರಕ್ಕೆ ಸಮಸ್ಯೆಯಾಗಿದ್ದು, ಅದಕ್ಕಾಗಿ ಹೊಸ ಯೋಜನೆ ರೂಪಿಸಿದೆ. ಮೌಂಟ್ ಎವರೆಸ್ಟ್ ಏರುವ ಪರ್ವತಾರೋಹಿಗಳು ಹೊಸ ನಿಯಮದ ಪ್ರಕಾರ ತಲಾ 8 ಕೆಜಿ(17.5 ಪೌಂಡ್) ಕಸವನ್ನು ವಾಪಸು ತರಬೇಕು. ವಿಶ್ವದ ಅತ್ಯಂತ ಎತ್ತರದ ಪರ್ವತದಲ್ಲಿ ಸ್ವಚ್ಛ ಪರಿಸರ ಉಂಟುಮಾಡುವುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಎವೆರೆಸ್ಟ್ ಬೇಸ್ ಕ್ಯಾಂಪ್‌ ದಾಟಿ ಮೇಲೆರುವ ಪರ್ವತಾರೋಹಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿ ಮದುಸೂದನ್ ತಿಳಿಸಿದ್ದಾರೆ.

ಪ್ರತಿಯೊಬ್ಬ ಪರ್ವತಾರೋಹಿ ತಮ್ಮ ಕಸದ ಜತೆ ಎವರೆಸ್ಟ್ ಶಿಖರದಲ್ಲಿ ಸಂಗ್ರಹವಾಗಿರುವ ಕಸದ ರಾಶಿಯಲ್ಲಿ ಕನಿಷ್ಠ 8 ಕಿಲೋ ಕಸವನ್ನು ವಾಪಸು ತರಬೇಕು ಎಂದು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.ಹೊಸ ನಿಮಯವನ್ನು ಉಲ್ಲಂಘಿಸಿದರೆ ಅಂತಹ ಪರ್ವತಾರೋಹಿಗಳ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಇದು ದಂಡವನ್ನು ಒಳಗೊಂಡಿದೆಯೇ ಎನ್ನುವುದು ಅಸ್ಪಷ್ಟವಾಗಿದೆ.

ದಶಕಗಳ ಕಾಲದಿಂದ ಎವೆರೆಸ್ಟ್ ಪರ್ವತ ಕಸದ ರಾಶಿಯಿಂದ ತುಂಬಿದೆ. ಅವುಗಳಲ್ಲಿ ಆಮ್ಲಜನಕ ಸಿಲಿಂಡರ್‌ಗಳು, ಮಾನವ ತ್ಯಾಜ್ಯ ಮತ್ತು ತೀವ್ರ ಶೀತದಲ್ಲಿ ಕೊಳೆಯದಿರುವ ಮೃತ ಪರ್ವತಾರೋಹಿಗಳ ದೇಹಗಳು ಕೂಡ ಸೇರಿವೆ. ಬೇಸ್ ಕ್ಯಾಂಪ್‌ನಲ್ಲಿರುವ ಕಚೇರಿಯಲ್ಲಿ ಪರ್ವತಾರೋಹಿಗಳು ಕಸವನ್ನು ಒಪ್ಪಿಸಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ