ಎಸ್‌ಎಂಎಸ್, ಸಾಮಾಜಿಕ ತಾಣಗಳು ದೇಶದ ಹಿತಕ್ಕೆ ಮಾರಕ : ಮುಖ್ಯಮಂತ್ರಿಗಳು

ಸೋಮವಾರ, 23 ಸೆಪ್ಟಂಬರ್ 2013 (15:43 IST)
PTI
ಸಾಮಾಜಿಕ ಅಂತರ್ಜಾಲ ತಾಣಗಳು ಕೋಮುಗಲಭೆಗೆ ಪ್ರಚೋದನೆ ತಾಣವಾಗುತ್ತಿರುವುದು ಪ್ರಮುಖ ಕಳವಳಕಾರಿ ಸಂಗತಿಯಾಗಿದೆ ಎಂದು ರಾಷ್ಟ್ರೀಯ ಏಕತೆ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ನಕಲಿ ವಿಡಿಯೋವನ್ನು ಬಿತ್ತರಿಸಿ ಕರ್ನಾಟಕದಲ್ಲಿದ್ದ ನೂರಾರು ಆಸ್ಸಾಂ ನಾಗರಿಕರು ಕರ್ನಾಟಕವನ್ನು ತೊರೆದೆ ಘಟನೆ ಮತ್ತು ಮುಜಾಫರ್‌ನಗರದಲ್ಲಿನ ಕೋಮುಗಲಭೆಗಳನ್ನು ಉಲ್ಲೇಖಿಸಿದ ಅವರು, ದೇಶದ ಜನತೆ ಸಾಮಾಜಿಕ ತಾಣವನ್ನು ಬೇಜವಾಬ್ದಾರಿಯಾಗಿ ಉಪಯೋಗಿಸಬಾರದು. ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಸುವಂತಹ ಶಕ್ತಿಗಳಿಗೆ ವೇದಿಕೆಯಾಗಬಾರದು ಎಂದು ಕರೆ ನೀಡಿದರು.

ಮುಜಾಫರ್‌ನಗರದಲ್ಲಿ ನಡೆದ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚಿನ ಮಂದಿ ಸಾವನ್ನಪ್ಪಿ 40 ಸಾವಿರಕ್ಕೂ ಹೆಚ್ಚಿನ ಜನ ನಿರಾಶ್ರಿತರಾಗಿರುವ ಘಟನೆಯನ್ನು ನಿಯಂತ್ರಿಸಲು ಹೆಣಗುತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಮಾತನಾಡಿ, ಕೋಮುಹಿಂಸಾಚಾರವನ್ನು ಹರಡುವಲ್ಲಿ ಸಾಮಾಜಿಕ ತಾಣ ಪ್ರಮುಖ ವೇದಿಕೆಯಾಗಿತ್ತು ಎಂದು ಹೇಳಿದ್ದಾರೆ.

ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಾತನಾಡಿ, ದೇಶದ ಹಿತಕ್ಕೆ ಧಕ್ಕೆ ತರುವಂತಹ ಸಂದೇಶಗಳನ್ನು ಉಚಿತವಾಗಿ ವರ್ಗಾಯಿಸಲು ಸಾಧ್ಯವಿರುವುದರಿಂದ ಎಸ್‌ಎಂಎಸ್ ಮತ್ತು ಸಾಮಾಜಿಕ ಅಂತರ್ಜಾಲ ತಾಣಗಳು ದೇಶಕ್ಕೆ ಬೆದರಿಕೆಯಾಗಿವೆ ಎಂದರು.

ವೆಬ್ದುನಿಯಾವನ್ನು ಓದಿ