ಐವರು ಪೊಲೀಸ್ ಪೇದೆಗಳಿಂದಲೇ ಬಾಲಕಿಯ ಮೇಲೆ ಎರಡುವರೆ ತಿಂಗಳು ಗ್ಯಾಂಗ್‌ರೇಪ್

ಶನಿವಾರ, 5 ಏಪ್ರಿಲ್ 2014 (13:09 IST)
ಸಹಾಯ ಯಾಚಿಸಿ ಬಂದ 17 ವರ್ಷ ವಯಸ್ಸಿನ ಶಾಲಾ ಬಾಲಕಿಗೆ ರಿವಾಲ್ವರ್ ತೋರಿಸಿ ಬೆದರಿಸಿ ಸುಮಾರು ಎರಡುವರೆ ತಿಂಗಳುಗಳ ಕಾಲ ನಿರಂತರ ಅತ್ಯಾಚಾರವೆಸಗಿದ ಐವರು ಕಾಮುಕ ಪೊಲೀಸ್ ಪೇದೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಗಳ ನಿರಂತರ ಅತ್ಯಾಚಾರದಿಂದ ಮನಮೊಂದು ಶಾಲಾಬಾಲಕಿ ಆತ್ಮಹತ್ಯೆಗೆ ಯತ್ನಿಸಿದಾಗ ಘಟನೆ ಬಹಿರಂಗವಾಗಿದೆ.

ಅತ್ಯಾಚಾರಕ್ಕೊಳಗಾದ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಭೇಟಿಗಾಗಿ ಬಂದ ಸಹೋದರನಿಗೆ ಬಾಲಕಿ ಘಟನೆಯ ಬಗ್ಗೆ ತಿಳಿಸಿದಾಗ ಸಹೋದರನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ಪೊಲೀಸರು ಆರೋಪಿ ಪೇದೆಗಳಾದ ಅಕ್ಷಯ್, ಸುನೀಲ್ , ಹಿಮ್ಮತ್ ಮತ್ತು ಜಗ್ತಾರ್‌ ಅವರನ್ನು ಆಸ್ಪತ್ರೆಯ ಬಳಿ ಸಾರ್ವಜನಿಕರು ಸ್ಥಳಿಸಿದ ನಂತರ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದ್ದು ಉದ್ಯೋಗದಿಂದ ಅಮಾನತ್ತುಗೊಳಿಸಲಾಗಿದೆ. ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಗ್ಯಾಂಗ್‌ರೇಪ್, ಬೆದರಿಕೆ, ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಆರೆ.ಕೆ.ಉಪಾಧ್ಯಾಯ ವಿವರಿಸಿದ್ದಾರೆ.

ಕಳೆದ ಆಕ್ಟೋಬರ್ ತಿಂಗಳಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಆರಂಭವಾದಾಗ ಶಾಲಾಬಾಲಕಿ 100 ಸಂಖ್ಯೆಗೆ ಕರೆಮಾಡಿ ಪೊಲೀಸ್ ನೆರವು ಯಾಚಿಸಿದ್ದಳು. ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಸೇವೆಯಲ್ಲಿದ್ದ ಪೊಲೀಸ್ ಪೇದೆ ಅಕ್ಷಯ್ ಮನೆಗೆ ಭೇಟಿ ನೀಡಿ ಬಾಲಕಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದನು.

ಶಾಲೆಯ ಬಳಿಗೆ ಬಂದ ಪೊಲೀಸ್ ಪೇದೆ ಅಕ್ಷಯ್, ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಶಾಲೆಯ ಹತ್ತಿರದಲ್ಲಿರುವ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ನಂತರ ಪೊಲೀಸ್ ಪೇದೆಗಳಾದ ಸುನೀಲ್, ಹಿಮ್ಮತ್, ಜಗ್ತಾರ್ ಮತ್ತು ಮತ್ತೊಬ್ಬ ಪೊಲೀಸ್ ಪೇದೆ ನಿರಂತರವಾಗಿ ಎರಡುವರೆ ತಿಂಗಳುಗಳ ಕಾಲ ಅತ್ಯಾಚಾರವೆಸಗಿದ್ದಾರೆ.

ಪೊಲೀಸರು ಆರಂಭದಲ್ಲಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಲ್ಲದೇ ಬಾಲಕಿಯ ಕುಟುಂಬವನ್ನು ಸಂಪರ್ಕಿಸಿ ಬೆದರಿಕೆಯೊಡ್ಡಿದ್ದಾರೆ. ಆದರೆ, ಮಾಜಿ ಸಂಸದರೊಬ್ಬ ಮಧ್ಯಪ್ರವೇಶದಿಂದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ