ಓಟಿಗಾಗಿ ನೋಟು: ರಾಜ್ಯಪಾಲ ಭಾರಧ್ವಾಜ್ ವಿರುದ್ಧ ದೂರು ದಾಖಲು

ಬುಧವಾರ, 29 ಫೆಬ್ರವರಿ 2012 (03:28 IST)
PR
ಕಳೆದ 2008ರಲ್ಲಿ ನಡೆದ ಓಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯಪಾಲರಾದ ಹಂಸರಾಜ್ ಭಾರಧ್ವಾಜ್ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.

ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ವಿಶ್ವನಾಥ್ ಚತುರ್ವೇದಿ, ರಾಜ್ಯಪಾಲ ಭಾರಧ್ವಾಜ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ತಲವಾನ್ ಸಿಂಗ್ ನೇತೃತ್ವದ ನ್ಯಾಯಪೀಠ, ಮಾರ್ಚ್ 3 ರಂದು ದೂರಿನ ವಿಚಾರಣೆ ನಡೆಸಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಯುಪಿಎ ಸರಕಾರದ ಪರವಾಗಿ ಮತಚಲಾಯಿಸಿದ್ದಕ್ಕೆ ಸಿಬಿಐ ತನಿಖೆ ಸ್ಥಗಿತಗೊಳಿಸಲು ನೆರವಾದ ಆರೋಪ ಭಾರಧ್ವಾಜ್ ಮೇಲಿದೆ.

ವಿಶ್ವಾಸಮತಕ್ಕೆ ಪ್ರತಿಯಾಗಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಸಂಬಂಧ 2005ರಲ್ಲಿ ಪ್ರಕರಣ ದಾಖಲಿಸಿ ಸಿಬಿಐ ಆರಂಭಿಸಿದ್ದ ತನಿಖೆಯನ್ನು ಸ್ಥಗಿತಗೊಳಿಸಲು ಭಾರಧ್ವಾಜ್ ನೆರವಾಗಿದ್ದರು ಎನ್ನುವುದು ದೂರುದಾರರ ಆರೋಪ.

ವೆಬ್ದುನಿಯಾವನ್ನು ಓದಿ