ಕಲ್ಲಿದ್ದಿಲು ಹಗರಣಕ್ಕೆ ಹೊಸ ತಿರುವು : ಬಿರ್ಲಾ ಸೇರಿದಂತೆ ಮೂರು ಕಂಪೆನಿಗಳ ವಿರುದ್ಧ ಕೇಸ್‌.

ಮಂಗಳವಾರ, 15 ಅಕ್ಟೋಬರ್ 2013 (19:12 IST)
PTI
PTI
ಕಲ್ಲಿದ್ದಲು ಹಗರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇಷ್ಟು ದಿನಗಳಾದರೂ ಕಲ್ಲಿದ್ದಲು ತನಿಖೆ ಸೂಕ್ತವಾದ ದಿಕ್ಕಿನಲ್ಲಿ ಸಾಗದಿರುವ ಕಾರಣಕ್ಕಾಗಿ ಇದೀಗ ಹೊಸ ಎಫ್ ಐಆರ್ ದಾಖಲಿಸಲಾಗಿದೆ. ಇದೀಗ ಹೊಸದಾಗಿ ದಾಖಲಿಸಲಾಗಿರುವ ದೂರಿನ ಅನ್ವಯ ಮೂರು ಸಂಸ್ಥೆಗಳು ಕಲ್ಲಿದ್ದಲು ಮಸಿಗೆ ಒಳಗಾಗಿವೆ.

ಹೊಸ ಎಫ್‌ಐ ಆರ್‌ನಲ್ಲಿ ಎನ್‌ಎಎಲ್‌ಸಿಒ (NALCO), ಹಿಂಡಲ್‌ಕೋ (HINDALCO) ಕಂಪನಿ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಚೇರ್‌ಮೆನ್ ಕುಮಾರ ಮಂಗಲಂ ಬಿರ್ಲಾ ಅವರ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ ಪರೇಖ್ ಅವರ ವಿರುದ್ಧವೂ ಎಫ್ ಐಆರ್ ದಾಖಲಿಸಲಾಗಿದೆ.

ಕಲ್ಲಿದ್ದಲು ಹಗರಣದ ಕಡತಗಳನ್ನು ಹುಡುಕುವಲ್ಲಿ ತನಿಖಾ ಸಿಬ್ಬಂದಿಗಳು ನಿರತರಾಗಿದ್ದು, ಈಗಾಗಲೇ ಹೈದ್ರಾಬಾದ್, ಕೊಲ್ಕತ್ತಾ ಮತ್ತು ಮುಂಬೈ ಮೊದಲಾದ ಸ್ಥಳಗಳಲ್ಲಿ ತೀವ್ರವಾದ ಶೋಧ ಆರಂಭವಾಗಿದೆ.

ನವಂಬರ್ 10, 2005ರಂದು ಒಡಿಶಾದಲ್ಲಿ ಕಲ್ಲಿದ್ದಲಿನ ಕಲ್ಲಿದ್ದಲು ಹಂಚಿಕೆ ಸಮಯದಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಅದರ ಸಹ ಸಂಸ್ಥೆಯಾಗಿರುವ ಹಿಂಡಾಲ್‌ಕೋ ವತಿಯಿಂದ ಭಾರೀ ಪ್ರಮಾಣದ ಅವ್ಯವಹಾರ ನಡೆಸಿದೆ ಎಂದು ಸಿಬಿಐ ಅಧಿಕಾರಿಗಳು ಎಫ್‌ಐಆರ್‌‌ನಲ್ಲಿ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ