ಕಾಂಗ್ರೆಸ್ ಕಾರ್ಯದಕ್ಷತೆಗಾಗಿ ಜನತೆ ಅಧಿಕಾರ ನೀಡಿದ್ದಾರೆ: ಮೋದಿಗೆ ಶೀಲಾ ದೀಕ್ಷಿತ್ ಸವಾಲ್

ಸೋಮವಾರ, 21 ಅಕ್ಟೋಬರ್ 2013 (15:35 IST)
PTI
ದೆಹಲಿಯ ಜನತೆ ಕಾಂಗ್ರೆಸ್ ಪಕ್ಷದ ಕಾರ್ಯದಕ್ಷತೆಯನ್ನು ಪರೀಕ್ಷಿಸಿದ ನಂತರವೇ ಬಹುಮತ ನೀಡಿ ಅಧಿಕಾರದ ಗದ್ದುಗೆಗೆ ಏರಿಸಿದ್ದಾರೆ. ದೆಹಲಿಯ ಅಭಿವೃದ್ಧಿ ಗುಜರಾತ್ ರಾಜ್ಯದ ಅಭಿವೃದ್ಧಿಗಿಂತ ಉತ್ತಮ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮೋದಿಗೆ ತಿರುಗೇಟು ನೀಡಿದ್ದಾರೆ.

ಚುನಾವಣೆ ಪ್ರಚಾರದ ಅಂಗವಾಗಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಆಡ್ವಾಣಿ, ಕಾಂಗ್ರೆಸ್ ಸರಕಾರ ದೆಹಲಿ ರಾಜ್ಯದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದೆ.ಯುವಕರಿಗೆ ಉದ್ಯೋಗವಕಾಶ ನೀಡಿದೆ. ಅಭಿವೃದ್ಧಿ ಪರವಾಗಿರುವ ಸರಕಾರವನ್ನು ಆಯ್ಕೆ ಮಾಡಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.

ದೆಹಲಿಯ ಉತ್ತಮ ಗುಣಮಟ್ಟದ ಜೀವನ ಮತ್ತು ಮೂಲಸೌಕರ್ಯಗಳ ಬಗ್ಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಗುಜರಾತ್‌ನ ಬಹು ಜಿಲ್ಲೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳ ಕೊರತೆಯಿರುವುದನ್ನು ಮೋದಿ ಮರೆಯಬಾರದು ಎಂದು ಗುಡುಗಿದರು.

ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ದಿಕ್ಷೀತ್, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮೋದಿ ಸಮುದಾಯದಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯದವರನ್ನು ಒಂದಾಗಿ ತೆಗೆದುಕೊಂಡು ಹೋಗುತ್ತಿದೆ ಎಂದರು.

ದೆಹಲಿ ರಾಜ್ಯದಲ್ಲಿ ಸರಕಾರಿ ಅನುದಾನಿತ 24 ಉನ್ನತ ಶಿಕ್ಷಣ ಸಂಸ್ಥೆಗಳಿವೆ. ವೃದ್ಧರಿಗೆ ವಿಧುವೆಯರು ಮತ್ತು ಅಂಗವಿಕಲರಿಗೆ ಮಾಸಿಕವಾಗಿ 1500 ರೂಪಾಯಿಗಳ ಸಹಾಯ ಧನ ನೀಡಲಾಗುತ್ತಿದೆ. ದೇಶದ ಯಾವುದೇ ಸರಕಾರ ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆಯೇ ಎಂದು ಮುಖ್ಯಮಂತ್ರಿ ಶೀಲಾ ದೀಕ್ಷಿತ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿಗೆ ಸವಾಲ್ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ