ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ

ಬುಧವಾರ, 5 ಡಿಸೆಂಬರ್ 2012 (12:27 IST)
PTI
ಯುವ ನಾಯಕ ರಾಹುಲ್‌ ಗಾಂಧಿ ಅವರ ನಾಯಕತ್ವದಲ್ಲಿ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ ಎಂದು ಪಕ್ಷದ ಮುಖವಾಣಿ 'ಕಾಂಗ್ರೆಸ್‌ ಸಂದೇಶ'ದಲ್ಲಿ ಅಭಿಪ್ರಾಯಪಡಲಾಗಿದೆ.

42ರ ಹರೆಯದ ರಾಹುಲ್‌ ಗಾಂಧಿ ಅವರು ಇದೀಗ ಪಕ್ಷದ ವ್ಯವಹಾರದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಪಕ್ಷದ ಪ್ರತಿ ಹಂತದಲ್ಲಿಯೂ ಅವರು ತನ್ನನ್ನು ತೊಡಗಿಸಿಕೊಂಡಿದ್ದಾರೆ. ಪಕ್ಷದ ಪರಂಪರೆಯಂತೆ ರಾಹುಲ್‌ ಗಾಂಧಿ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ಸನ್ನದ್ಧರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪಕ್ಷ ರಾಹುಲ್‌ ಗಾಂಧಿ ಅವರಿಂದ ಹೆಚ್ಚಿನ ಕೊಡುಗೆಯನ್ನು ನಿರೀಕ್ಷಿಸುತ್ತಿದ್ದು, ಇದೀಗ ಆ ನಿರೀಕ್ಷೆಗಳು ಕೈಗೂಡುವ ಕಾಲ ಸನ್ನಿಹಿತವಾಗಿದೆ ಎಂದು 'ಕಾಂಗ್ರೆಸ್‌ ಸಂದೇಶ'ದ ಸಂಪಾದಕೀಯದಲ್ಲಿ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ