ಕಾಂಗ್ರೆಸ್, ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು: ಅಣ್ಣಾ ಹಜಾರೆ

ಶುಕ್ರವಾರ, 13 ಡಿಸೆಂಬರ್ 2013 (18:35 IST)
PTI
ರಾಜ್ಯಸಭೆಯಲ್ಲಿ ಲೋಕಪಾಲ್ ಮಸೂದೆ ಮಂಡನೆಯಾಗದೆ ಕಲಾಪವನ್ನು ಮುಂದೂಡವುದಕ್ಕೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷವೇ (ಬಿಜೆಪಿ) ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ.

ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ಅವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಅಣ್ಣಾ ಹಜಾರೆ ಅವರು ಮಾತನಾಡಿ, ಕಲಾಪ ಮುಂದೂಡಲು ಬಿಜೆಪಿಯು ಕಾರಣ. ಸುಮ್ಮನೆ ಇಲ್ಲದ ಸಲ್ಲದ ನೆಪಗಳನ್ನು ಹೇಳಿ ಕಲಾಪವನ್ನು ಮುಂದೂಡುತ್ತಿದ್ದಾರೆ. ಇದರಿಂದ ಲೋಕಪಾಲ್ ಮಸೂದೆ ಮಂಡನೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ದೇಶದ ಕಲ್ಯಾಣ ನಮಗೆ ಮುಖ್ಯವಾಗಿದೆ. ಕೇಂದ್ರ ಸರ್ಕಾರ ಪ್ರಬಲ ಜನ ಲೋಕಪಾಲ್ ಮಸೂದೆ ಜಾರಿ ಮಾಡಿದರೆ, ಜನರಿಗೆ ನ್ಯಾಯ ಸಿಗಲಿದೆ. ಆದರೆ ಲೋಕಪಾಲ್ ಮಸೂದೆಗೆ ಜಾರಿಗೆ ತಡೆ ಹಾಕಲಾಗುತ್ತಿದೆ. ಮಸೂದೆ ಜಾರಿಯಾದರೆ ಉನ್ನತ ಸ್ಥಾನದಲ್ಲಿರುವವರು ಕೂಡ ತನಿಖೆ ಎದುರಿಸಬೇಕಾಗುತ್ತದೆ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರು ಒಳಪಡುತ್ತಾರಾದ್ದರಿಂದ ನಿಧಾನ ಮಾಡುಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ