ಕೀಟಲೆ ಅಥವಾ ಸಂಚು? ಕಪಿಲ್ ಸಿಬಲ್‌ಗೆ 1 ಲಕ್ಷ ರೂ. ಲಂಚದ ಹಣ ರವಾನೆ

ಬುಧವಾರ, 31 ಆಗಸ್ಟ್ 2011 (18:00 IST)
PTI
ಜಾರ್ಖಂಡ್ ರಾಜ್ಯದಲ್ಲಿರುವ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಖಾಲಿಯಿರುವ ರಿಜಿಸ್ಟ್ರಾರ್ ಹುದ್ದೆಗೆ ನೇಮಕ ಮಾಡುವಂತೆ ವ್ಯಕ್ತಿಯೊಬ್ಬರು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್‌ಗೆ 1 ಲಕ್ಷ ರೂಪಾಯಿ ಮೌಲ್ಯದ ಲಂಚದ ಚೆಕ್ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಅವರಿಗೆ 1ಲಕ್ಷ ರೂಪಾಯಿ ಲಂಚದ ಚೆಕ್ ಕಳುಹಿಸಿರುವ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಆರೋಪಿಯ ವಿರುದ್ಧ ಭ್ರಷ್ಟಚಾರ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕಳೆದ ಮಂಗಳವಾರದಂದು ಮಾನವ ಸಂಪನ್ಮೂಲ ಖಾತೆ ಸಚಿವಾಲಯಕ್ಕೆ ಸಚಿವ ಸಿಬಲ್ ಅವರ ಹೆಸರಿನಲ್ಲಿ ಲಕೋಟೆ ಬಂದಿದ್ದು, ಲಕೋಟೆಯಲ್ಲಿ 1 ಲಕ್ಷ ರೂಪಾಯಿ ಚೆಕ್‌ನೊಂದಿಗೆ ಪತ್ರವೊಂದನ್ನು ಲಗತ್ತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಂಚಿಯ ದ್ರುವಾ ಜಿಲ್ಲೆಯ ಒಂಪ್ರಕಾಶ್ ಎನ್ನುವ ವ್ಯಕ್ತಿಯೊಬ್ಬರು ಸೆಂಟ್ರಲ್ ಯುನಿವರ್ಸಿಟಿ ಆಫ್ ಜಾರ್ಖಂಡ್‌ನಲ್ಲಿ ಖಾಲಿಯರುವ ರಿಜಿಸ್ಟ್ರಾರ್ ಅಥವಾ ಉಪರಿಜಿಸ್ಟ್ರಾರ್ ಹುದ್ದೆಗೆ ನೇಮಕ ಮಾಡುವಂತೆ ಒತ್ತಾಯಿಸಿ, ಕೆನರಾ ಬ್ಯಾಂಕ್‌ನ 1 ಲಕ್ಷ ರೂಪಾಯಿ ಮೌಲ್ಯದ ಚೆಕ್‌ನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಿದ್ದರು.

ಆರೋಪಿಯ ವಿರುದ್ಧ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿಯಾದ ಅಮಿತ್ ಖಾರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ