ಕೆಲ ಕಾಂಗ್ರೆಸ್ ಸಂಸದರು ಜಯಗಳಿಸಲು ಆರೆಸ್ಸೆಸ್ ಬೆಂಬಲ ಪಡೆದಿದ್ದಾರೆ: ಬಿಜೆಪಿ
ಗುರುವಾರ, 10 ಏಪ್ರಿಲ್ 2014 (16:31 IST)
ಕೆಲವು ಕಾಂಗ್ರೆಸ್ ಸಂಸದರು 2009 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲ ಕೋರಿದ್ದರು ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶೇಷಾದ್ರಿ ಚಾರಿ ಹೇಳಿದ್ದಾರೆ ಎಂದು ವರದಿಯಾಗಿದೆ.
PTI
2009 ರ ಚುನಾವಣೆಯಲ್ಲಿ ಆಯ್ಕೆಯಾಗ ಬಯಸಿ ಕೆಲವು ಕಾಂಗ್ರೆಸ್ ಸಂಸದರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದರು ಎಂಬುದು ನನಗೆ ತಿಳಿದಿದೆ " ಎಂದು ಚಾರಿ ಹೇಳಿದ್ದಾರೆ.
ಚಾರಿಯವರ ಈ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್ ವಕ್ತಾರ ಸಂಜಯ್ ಝಾ "ಚಾರಿ ಆರೋಪ ನಿರಾಧಾರವಾದದ್ದು. ತಾವು ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದೆ ಎಂದು ಅವರು ಹೇಳುತ್ತಿದ್ದಾರೆ. ಅವರಿಂದ ಸಹಾಯ ಪಡೆದಿರುವವರು ಯಾರೆಂದು ಹೆಸರಿಸಲಿ" ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಸಂಜಯ್ ಸವಾಲೆಸೆದಿದ್ದಾರೆ.