ಕೇಂದ್ರ ವಿತ್ತ ಸಚಿವ ಚಿದಂಬರಂ ಮಂಡಿಸಿದ ಬಜೆಟ್ ಮುಖ್ಯಾಂಶಗಳು ಕೆಳಗಿವೆ ಓದಿ

ಸೋಮವಾರ, 17 ಫೆಬ್ರವರಿ 2014 (12:28 IST)
PR
PR
ನವದೆಹಲಿ: ಕೇಂದ್ರ ಸಚಿವ ಚಿದಂಬರಂ ಇಂದು ಲೋಕಸಭೆಯಲ್ಲಿ ಬಜೆಟ್ ಭಾಷಣ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರು. ತೆಲಂಗಾಣ ಪರ ಸಂಸದರು ಬಜೆಟ್ ಮಂಡನೆಗೆ ಅಡ್ಡಿಪಡಿಸಿ 'ವಿ ವಾಂಟ್ ಜಸ್ಟೀಸ್ 'ಎಂಬ ಘೋಷಣೆಗಳನ್ನು ಕೂಗುವ ಮೂಲಕ ತೆಲಂಗಾಣ ಎಫೆಕ್ಟ್ ತೀವ್ರತರವಾಗಿದ್ದರಿಂದ ಬಜೆಟ್ ಭಾಷಣ ಮಾಡುವುದಿಲ್ಲ ಎಂದು ಚಿದಂಬರಂ ಘೋಷಿಸಿದರು ಮತ್ತು 4 ತಿಂಗಳ ಅವಧಿಗೆ ಲೇಖಾನುದಾನ ಮಂಡನೆಯನ್ನು ಚಿದಂಬರಂ ಆರಂಭಿಸಿದರು.ಬೆಲೆ ಏರಿಕೆ ಹಣದುಬ್ಬರ ಆತಂಕಕಾರಿಯಾಗಿದೆ ಎಂದು ಈ ಸಂದರ್ಭದಲ್ಲಿ ವಿತ್ತಸಚಿವರು ತಿಳಿಸಿದರು. ವಿತ್ತೀಯ ಕೊರತೆ ಇಳಿಕೆಯಲ್ಲಿ ಉತ್ತಮ ಬೆಳವಣಿಗೆಯಾಗಿದೆ. 2013-14ರಲ್ಲಿ ಶೇ. 4.6ರಷ್ಟು ವಿತ್ತೀಯ ಕೊರತೆ ಉಂಟಾಗಿದೆ ಎಂದು ಅವರು ಹೇಳಿದರು.

ನಮ್ಮ ಅಭಿವೃದ್ಧಿ ವಿಶ್ವದ ಆರ್ಥಿಕ ಬದಲಾವಣೆ ಮೇಲಿದೆ ಎಂದರು. ಕಳೆದ ವರ್ಷಕ್ಕಿಂತ ಈ ವರ್ಷ ಅಭಿವೃದ್ಧಿ ಹೆಚ್ಚಿದೆ ಎಂದು ವಿತ್ತಸಚಿವರು ಹೇಳಿದರು. ಜಗತ್ತಿನ ಆರ್ಥಿಕ ಕುಸಿತದ ಕರಿನೆರಳು ಭಾರತದ ಆರ್ಥಿಕತೆ ಮೇಲೆ ಚಾಚಿದೆ ಎಂದು ತಿಳಿಸಿದರು. ಚಿದಂಬರಂ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ಯಾವ ಬದಲಾವಣೆ ಮಾಡಿಲ್ಲ.ವಿದ್ಯಾರ್ಥಿಗಳ ಸಾಲದ ಮೇಲಿನ ಬಡ್ಡಿದರ ಇಳಿಸಿದ್ದಾರೆ. ಕಾರುಗಳ ಮಾರಾಟ ದರ ಇಳಿಕೆಯಾಗಿದೆ. ಫ್ರಿಡ್ಜ್, ಟಿವಿ, ಸೋಪು ಸ್ವದೇಶಿ ಉತ್ಪಾದನೆಯ ಮೊಬೈಲ್ ಬೆಲೆ ಇಳಿಸಿದ್ದಾರೆ. ಅಬಕಾರಿ ಸುಂಕ ಶೇ. 12ರಿಂದ 10ಕ್ಕೆ ಇಳಿಕೆಯಾಗಿದೆ.
ವಿತ್ತ ಸಚಿವ ಚಿದಂಬರಂ ಮಂಡಿಸಿದ ಲೇಖಾನುದಾನದ ಮುಖ್ಯಾಂಶಗಳಿಗೆ ಮುಂದಿನ ಪುಟ ನೋಡಿ

PR
PR
* ಶಿಕ್ಷಣಕ್ಕೆ 79 ಸಾವಿರ ಕೋಟಿ ವೆಚ್ಚ.
* 9 ತಿಂಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ.
* ನಿರ್ಭಯ ನಿಧಿಗೆ ಸಾವಿರ ಕೋಟಿ,
* 20 ಸಾವಿರ ಕಿಮೀ ಗ್ರಾಮೀಣ ರಸ್ತೆಗೆಳ ನಿರ್ಮಾಣ,
* ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ,
* 9 ತಿಂಗಳಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ,
* ಕಮ್ಯುನಿಟಿ ರೇಡಿಯೋ ಸ್ಟೇಷನ್‌ಗೆ 100 ಕೋಟಿ ಅನುದಾನ,
* ಹಿ.ಪ್ರದೇಶ, ಉತ್ತರ ಖಂಡ ಅಭಿವೃದ್ಧಿಗೆ 1200 ಕೋಟಿ ರೂ.
* ಪರಿಶಿಷ್ಟ ಜಾತಿ ಅಭಿವೃದ್ಧಿಗೆ 200 ಕೋಟಿ ರೂ.
* ಹಣದುಬ್ಬರ ದರ ಶೇ. 5ಕ್ಕೆ ಇಳಿಕೆ.
* 50 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ.
*ಸಬ್ಸಿಡಿ ಸಿಲಿಂಡರ್ ಪಡೆಯಲು ಆಧಾರ್ ಕಡ್ಡಾಯವಲ್ಲ, *ಯೋಜನೇತರ ವೆಚ್ಚಗಳಿಗೆ 5 ಲಕ್ಷ ಕೋಟಿ.
* ದೇಶದಲ್ಲಿ ಹೆದ್ದಾರಿಗಳ ನಿರ್ಮಾಣಕ್ಕೆ ಅನುದಾನ
* 180 ಮಿಲಿಯನ್ ವಿದ್ಯುತ್ ಉತ್ಪಾದನೆ ಗುರಿ
* ಭರದಿಂದ ಸಾಗಿದೆ ಆಧಾರ್ ಕಾರ್ಡ್ ವಿತರಣೆ

* ಚೆನ್ನೈ-ಬೆಂಗಳೂರು, ಬೆಂಗಳೂರು-ಮುಂಬೈ, ಅಮತಸರ- ಕೊಲ್ಕತ್ತಾ ನಡುವೆ ಕೈಗಾರಿಕಾ ಕಾರಿಡಾರ್ ಪ್ರಗತಿ,
* ಸ್ಟೀಲ್, ಸಿಮೆಂಟ್ ಹಲವು ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ
* ಬಡತನ ನಿರ್ಮೂಲನೆಗೆ 6 ಸಾವಿರ ಕೋಟಿ ರೂ.
* 3 ಹೊಸ ಕೈಗಾರಿಕೆ ಕಾರಿಡಾರ್ ಯೋಜನೆಗೆ ಒತ್ತು ನೀಡಲಾಗಿದೆ.

PR
PR
* ಇಂಧನ ವಲಯಕ್ಕೆ ಪ್ರತಿ ವರ್ಷ 57 ಸಾವಿರ ಕೋಟಿ ಸಹಾಯಧನ
* 57 ಕೋಟಿ ಆಧಾರ್ ಕಾರ್ಡ್ ವಿತರಿಸಲಾಗಿದೆ.
* ಸಾಮಾಜಿಕ ನ್ಯಾಯ ಇಲಾಖೆಗೆ 6730 ಕೋಟಿ.
* ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 21 ಸಾವಿರ ಕೋಟಿ
*ನಿರ್ಮಾಣ ಹಂತದಲ್ಲಿ ಏಳು ಅಣುವಿದ್ಯುತ್ ರಿಯಾಕ್ಟರುಗಳು
*ದೇಶಾದ್ಯಂತ ನೇರ ಸಬ್ಸಿಡಿ ವರ್ಗಾವಣೆ ಯೋಜನೆ ಜಾರಿ
* ಸಕ್ಕರೆ ನಿಯಂತ್ರಣ ರದ್ದು
* ನಿರ್ಮಾಣ ಹಂತದಲ್ಲಿ ಏಳು ಅಣು ರಿಯಾಕ್ಟರುಗಳು
* 9 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಸಾಲದ ಫಲಾನುಭವಿಗಳಾಗಿದ್ದಾರೆ.
* ಯೋಧರ ಪಿಂಚಣಿಗೆ 500 ಕೋಟಿ ಮೀಸಲು
* 7 ಹೊಸ ವಿಮಾನನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ
* ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ

*ಎಸ್‌ಯುವಿ ಕಾರುಗಳ ಬೆಲೆ ಕಡಿಮೆಯಾಗಲಿದೆ
* 41 ಲಕ್ಷದ 16 ಸಾವಿರ ಮಹಿಳೆಯರಿಗೆ ಸ್ವಸಹಾಯ ಗುಂಪಿನಿಂದ ಸಾಲ
* ಅಬಕಾರಿ ಸುಂಕ ಶೇ. 12ರಿಂದ 10ಕ್ಕೆ ಇಳಿದೆ.
* ಕಾರುಗಳ ಮಾರಾಟ ದರ ಇಳಿಕೆ
* ವಿದ್ಯಾರ್ಥಿಗಳ ಸಾಲದ ಮೇಲಿನ ಬಡ್ಡಿದರ ಇಳಿಕೆ
* ಗೃಹ ಇಲಾಖೆಗೆ 2, 24,000 ಕೋಟಿ ರೂ. ಅನುದಾನ
*ಪ್ರಪಂಚದಲ್ಲೇ ಭಾರತದ ಆರ್ಥಿಕ ಸ್ಥಿತಿ 11ನೇ ಸ್ಥಾನದಲ್ಲಿದೆ.
*ಯುಪಿಎ-2 ಅವಧಿಯ ಸರಾಸರಿ ಬೆಳವಣಿಗೆ ದರ ಶೇ. 6.2.
* ಹೊಸ ಬ್ಯಾಂಕ್ ಲೈಸನ್ಸ್‌ಗಳಿಗೆ ಅರ್ಜಿ ವಿತರಣೆ

* ಫ್ರಿಡ್ಜ್, ಟಿವಿ, ಸೋಪು ಭಾರತದಲ್ಲಿ ಉತ್ಪಾದನೆಯಾಗುವ ಮೊಬೈಲ್ ಬೆಲೆ ಇಳಿಕೆ
* ಸುಂಕ ಹೆಚ್ಚಿಸಿದ್ದರಿಂದ ಸಿಗರೇಟ್ ದರ ದುಬಾರಿಯಾಗಿದೆ
*ಸಿಗರೇಟ್ ಮೇಲಿನ ಅಬಕಾರಿ ದರ ಶೇ. 18ರಷ್ಟು ಹೆಚ್ಚಳ
* ಪುರುಷರು ತರುವ 50,000 ಮೊತ್ತದ ಚಿನ್ನಕ್ಕೆ ಸುಂಕವಿಲ್ಲ
*ಸ್ತ್ರೀಯರು ತರುವ 1 ಲಕ್ಷ ರೂ. ಮೊಲ್ಯದ ಚಿನ್ನಕ್ಕೆ ಸುಂಕವಿಲ್ಲ

PR
PR
* ಕಾರು, ದ್ವಿಚಕ್ರವಾಹನ ಮಾರಾಟ ದರ ಇಳಿಕೆ
* ಆರ್ಥಿಕ ಪ್ರಗತಿಯಲ್ಲಿ ಮೂರನೇ ಸ್ಥಾನಕ್ಕೇರುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

ತೆಲಂಗಾಣ ಸದಸ್ಯರನ್ನು ಸುಮ್ಮನಾಗಿಸಲು ಸ್ಪೀಕರ್ ಹರಸಾಹಸ ಮಾಡಿದರೂ ಸದಸ್ಯರು ಘೋಷಣೆಗಳನ್ನು ಮುಂದುವರಿಸಿದರು. ಚಿದಂಬರಂ ಲೇಖಾನುದಾನ ಮಂಡಿಸುತ್ತಿದ್ದಂತೆ ಸದನದಲ್ಲಿ ಮತ್ತಷ್ಟು ಕೋಲಾಹಲ ಉಂಟಾಯಿತು. ಈ ಹಿನ್ನೆಲೆಯಲ್ಲಿ ಬಜೆಟ್ ಪೂರ್ಣ ಭಾಷಣವನ್ನು ಮಾಡದೇ ಚಿದಂಬರಂ ಲೇಖಾನುದಾನ ಮಂಡಿಸಿ ಭಾಷಣ ಮುಗಿಸಿದರು.

ವೆಬ್ದುನಿಯಾವನ್ನು ಓದಿ