ಕೇಜ್ರಿವಾಲ್ ಒಳ್ಳೆಯ ಮುಖ್ಯಮಂತ್ರಿ: ಎನ್‌ಡಿಟಿವಿ ಸಮೀಕ್ಷೆಯಲ್ಲಿ ಬಯಲು

ಶನಿವಾರ, 25 ಜನವರಿ 2014 (11:06 IST)
ನವದೆಹಲಿ: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಧರಣಿ ನಡೆಸಿದ್ದರಿಂದ ಅವರ ಜನಪ್ರಿಯತೆ ಕುಗ್ಗಿದೆಯೇ? ಎನ್‌ಡಿಟಿವಿ ನಡೆಸಿದ ವಿಶೇಷ ಸಮೀಕ್ಷೆಯಲ್ಲಿ ರಾಷ್ಟ್ರೀಯ ರಾಜಧಾನಿ, ಬೆಂಗಳೂರು ಮತ್ತು ಮುಂಬೈನ ಮಾದರಿ ಅಭಿಪ್ರಾಯದಲ್ಲಿ ಬಹುತೇಕ ಮಂದಿ ಈ ಪ್ರತಿಭಟನೆಗೆ ಬೆಂಬಲಿಸಿದ್ದಾರೆ. ಆದರೆ ದೆಹಲಿ ಪೊಲೀಸರು ರಾಜ್ಯ ಸರ್ಕಾರದ ಅಧೀನವಾಗುವುದಕ್ಕೆ ಅವರು ಒಪ್ಪಿಲ್ಲ. ಸಮೀಕ್ಷೆಯ ಫಲಿತಾಂಶಗಳು ಕೆಳಗಿನಂತಿವೆ, ಎಲ್ಲ ಪ್ರತಿಕ್ರಿಯೆಗಳ ಪೈಕಿ ಮೂರನೇ ಎರಡರಷ್ಟು ಜನರು ಕೇಜ್ರಿವಾಲ್ ಉತ್ತಮ ಮುಖ್ಯಮಂತ್ರಿ ಎಂದು ಅನುಮೋದನೆ ನೀಡಿದ್ದಾರೆ.

PR
PR
ದೆಹಲಿಯಲ್ಲಿ ಸಮೀಕ್ಷೆ ನಡೆಸಿದ ಶೇ.58ರಷ್ಟು ಜನರು ಉತ್ತಮ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಮುಂಬೈನಲ್ಲಿ ಕೇಜ್ರಿವಾಲ್ ಅವರಿಗೆ ಅತ್ಯಧಿಕ ಅನುಮೋದನೆ ರೇಟಿಂಗ್ ಸಿಕ್ಕಿದೆ.ಕೇಜ್ರಿವಾಲ್ ಧರಣಿ ನಡೆಸಿದ್ದು ಸರಿಯಾಗಿದೆ ಎಂದು ಅರ್ಧದಷ್ಟು ಜನರು ಹೇಳಿದ್ದಾರೆ.

ಮುಂಬೈನಲ್ಲಿ ಶೇ. 58 ಮತ್ತು ದೆಹಲಿಯಲ್ಲಿ ಶೇ. 51 ಜನರು ದೆಹಲಿಯಲ್ಲಿ ಧರಣಿ ಮಾಡಿದ್ದು ಸರಿ ಎಂದು ಹೇಳಿದ್ದಾರೆ.ದೆಹಲಿಯಲ್ಲಿ ಅವರ ಬೆಂಬಲದ ನೆಲೆ ಭದ್ರವಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಕಣ್ಣಿರಿಸಿರುವ ಎಎಪಿ ಬಲಪಡೆಯಬಹುದೆಂದು ಭಾವಿಸಲಾಗಿದೆ. ಅರ್ಧಕ್ಕೂ ಹೆಚ್ಚು ಪ್ರತಿಕ್ರಿಯೆದಾರರು ಅಸೆಂಬ್ಲಿ ಚುನಾವಣೆ ನಡೆದರೆ ಎಎಪಿಗೆ ಮತ್ತೆ ವೋಟ್ ಮಾಡುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ