ಕೇಜ್ರಿವಾಲ್ ಜತೆ ಇಬ್ಬರು ಶಾಸಕರ ರಾಜಿ: ಸರ್ಕಾರಕ್ಕೆ ಕಂಟಕ ನಿವಾರಣೆ

ಬುಧವಾರ, 5 ಫೆಬ್ರವರಿ 2014 (13:02 IST)
PR
PR
ನವದೆಹಲಿ: ಎಎಪಿ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಬೆದರಿಕೆ ಹಾಕಿದ್ದ ಜೆಡಿಯು ಶಾಸಕ ಶೋಯಬ್ ಇಕ್ಬಾಲ್ ಮತ್ತು ಪಕ್ಷೇತರ ಶಾಸಕ ರಾಮಬೀರ್ ಶೊಕೀನ್ ಉಲ್ಟಾ ಹೊಡೆದಿದ್ದು, ಮನಸ್ಸು ಬದಲಾಯಿಸಿರುವುದರಿಂದ ದೆಹಲಿ ಸರ್ಕಾರಕ್ಕೆ ಎದುರಾಗಿದ್ದ ಕಂಟಕ ನಿವಾರಣೆಯಾಗಿದೆ. ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿದ್ದರೆ ಸರ್ಕಾರ ಬಹುಮತ ಕಳೆದುಕೊಂಡು ಉರುಳುವ ಸಾಧ್ಯತೆಯಿತ್ತು. ನಿನ್ನೆ ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ಜತೆ ಸೇರಿಕೊಂಡು ತಮ್ಮ ಬೇಡಿಕೆ ಈಡೇರಿಸದಿದ್ದರೆ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ಶಾಸಕರು ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ ಬಳಿಕ ಮನಸ್ಸು ಬದಲಾಯಿಸಿದರು.

ದೆಹಲಿ ಸಚಿವಾಲಯದಲ್ಲಿ ಇಕ್ಬಾಲ್ ಅವರು ಶೊಕೀನ್ ಜತೆ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಅವರ ಬೇಡಿಕೆಗಳಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರೆಂದು ಹೇಳಿದ್ದಾರೆ.ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ ಬಳಿಕ, ನಾವು ಸರ್ಕಾರಕ್ಕೆ ಬೆಂಬಲ ವಾಪಸ್ ತೆಗೆದುಕೊಳ್ಳದಿರಲು ನಿರ್ಧರಿಸಿದೆವು ಎಂದು ಇಕ್ಬಾಲ್ ತಿಳಿಸಿದ್ದಾರೆ.ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ ಬಳಿಕ, ನಾವು ಸರ್ಕಾರಕ್ಕೆ ಬೆಂಬಲ ವಾಪಸ್ ತೆಗೆದುಕೊಳ್ಳದಿರಲು ನಿರ್ಧರಿಸಿದೆವು ಎಂದು ಇಕ್ಬಾಲ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ