ಕೇಜ್ರಿವಾಲ್ ಮೇಲೆ ಇಂಕ್ ಚೆಲ್ಲಿದ ಬಿಜೆಪಿ ಕಾರ್ಯಕರ್ತ

ಸೋಮವಾರ, 18 ನವೆಂಬರ್ 2013 (19:04 IST)
PR
PR
ನವದೆಹಲಿ: ಅಣ್ಣಾಹಜಾರೆ ಮುಂದಾಳತ್ವದ ಭ್ರಷ್ಟಾಚಾರ ನಿಗ್ರಹ ಪ್ರತಿಭಟನೆಯ ಸಂದರ್ಭದಲ್ಲಿ ಸಂಗ್ರಹಿಸಿದ ನಿಧಿಯನ್ನು ಕೇಜ್ರಿವಾಲ್ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆಯೇ? ಹೀಗೆಂದು ಅನೇಕ ಜನರು ಅಣ್ಣಾ ಹಜಾರೆ ಅವರಿಗೆ ಕೇಜ್ರಿವಾಲ್ ವಿರುದ್ಧ ದೂರು ನೀಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿ, ತಾವು ತಪ್ಪಿತಸ್ಥರೆಂದು ಕಂಡುಬಂದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ನಿಲುವನ್ನು ವಿವರಿಸುತ್ತಿದ್ದಾಗಲೇ ಮಹಾರಾಷ್ಟ್ರದ ಬಿಜೆಪಿ ಕಾರ್ಯಕರ್ತನೊಬ್ಬ ಅವರ ಮೇಲೆ ಮಸಿ ಚೆಲ್ಲಿದ ಮತ್ತು ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿ ಘೋಷಣೆ ಕೂಗಿದ.ತಕ್ಷಣ ಕಾರ್ಯಕರ್ತನನ್ನು ಹಿಡಿದು ಹೊರಗೆ ಸಾಗಿಸಲಾಯಿತು.

ಅಣ್ಣಾ ಅವರಿಂದ ಕಳೆದ ರಾತ್ರಿ ನನಗೆ ಪತ್ರಸಿಕ್ಕಿತು.ಅನೇಕ ಜನರು ನನ್ನ ಮೇಲೆ ದೂರು ನೀಡಿದ್ದಾರೆಂದು ಹೇಳಿದರು. ಆಂದೋಳನ ಹಣವನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಿಲ್ಲವೆಂದು ಆಶಿಸುವುದಾಗಿ ಅಣ್ಣಾ ತಿಳಿಸಿದ್ದರು. ಈ ಕುರಿತು ಯಾವುದೇ ಮಾಜಿ ನ್ಯಾಯಾಧೀಶರ ತನಿಖೆಗೆ ಆದೇಶಿಸಬಹುದು ಎಂದು ಕೇಜ್ರಿವಾಲ್ ಹೇಳಿದರು.ನನ್ನ ವಿರುದ್ಧ ತೀರ್ಪು ಬಂದರೆ, ನಾನು ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದರು.

ವೆಬ್ದುನಿಯಾವನ್ನು ಓದಿ