ಕೇಜ್ರಿವಾಲ್ ರಾಜೀನಾಮೆ ಸ್ವೀಕರಿಸಿದ ಪ್ರಣವ, ದೆಹಲಿಯಲ್ಲಿ ಜಾರಿಯಾದ ರಾಷ್ಟಪತಿ ಆಡಳಿತ

ಸೋಮವಾರ, 17 ಫೆಬ್ರವರಿ 2014 (18:10 IST)
PTI
ಅರವಿಂದ್ ಕೇಜ್ರಿವಾಲ್ ಸರ್ಕಾರದ ರಾಜೀನಾಮೆಗೆ ಸಮ್ಮತಿಸಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದಾರೆ. ವಿಧಾನಸಭೆಯನ್ನು ಅಮಾನತುಗೊಳಿಸಲಾಗಿದೆ.

ವಿಧಾನಸಭೆಯಲ್ಲಿ ಜನಲೋಕಪಾಲ ಮಸೂದೆ ಪರಿಚಯಿಸಲು ವಿಫಲವಾದ ಕಾರಣಕ್ಕೆ ಆಪ್ ಸರಕಾರ ಕಳೆದ ಶುಕ್ರವಾರ ರಾಜೀನಾಮೆ ನೀಡಿತ್ತು

ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿರುವ ರಾಷ್ಟ್ರೀಯ ರಾಜಧಾನಿಯ ಆಡಳಿತ ಲೆಫ್ಟಿನೆಂಟ್ ಗವರ್ನರ್ ಮೂಲಕ ನಡೆಸಲ್ಪಡುತ್ತದೆ

ಆಪ್ ವಿಧಾನಸಭೆಯನ್ನು ವಿಸರ್ಜಿಸುವಂತೆ ಮತ್ತು ಚುನಾವಣೆಯನ್ನು ಘೋಷಿಸುವಂತೆ ಲೆಫ್ಟಿನೆಂಟ್ ಗವರ್ನರ್ ಗೆ ಶಿಫಾರಸು ಮಾಡಿದೆ.

ವೆಬ್ದುನಿಯಾವನ್ನು ಓದಿ