ಕೇಜ್ರಿವಾಲ್ ರಿಗೆ ಕೇವಲ ಅಧಿಕಾರದ ಚಿಂತೆ, ದೇಶದ್ದಲ್ಲ: ಅಣ್ಣಾ ಹಜಾರೆ.

ಸೋಮವಾರ, 17 ಫೆಬ್ರವರಿ 2014 (12:51 IST)
PTI
ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ರ ವಿರುದ್ಧ ವಾಗ್ದಾಳಿ ನಡೆಸಿರುವ ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ " ಕೇಜ್ರಿವಾಲ್ ರಿಗೆ ದೇಶದ ಮತ್ತು ಸಮಾಜದ ಚಿಂತೆ ಇಲ್ಲ. ಈಗ ಅವರಿಗೆ ಕೇವಲ ಅಧಿಕಾರದ ಚಿಂತೆ. ಜನಲೋಕಪಾಲ್ ವಿಷಯದಲ್ಲಿ ಆತ ಸ್ವಲ್ಪವೂ ಗಂಭೀರನಾಗಿರಲಿಲ್ಲ " ಎಂದು ಹೇಳಿದ್ದಾರೆ.

ಜನಲೋಕಪಾಲ್ ಮಸೂದೆ ಮಂಡನೆ ವಿಫಲವಾದ ಕಾರಣಕ್ಕಾಗಿ ಸೋಮವಾರ ರಾಜೀನಾಮೆ ಸಲ್ಲಿಸಿರುವ ಕೇಜ್ರಿವಾಲ್ ನಿಯತ್ತಿನ ಬಗ್ಗೆ ಸವಾಲೆಸೆದಿರುವ ಅಣ್ಣಾ " ಮಸೂದೆಗೆ ಸಂಬಂಧಿಸಿದಂತೆ ಸಂವಿಧಾನಿಕ ಅನಿವಾರ್ಯತೆಗಳಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ಜತೆಗೆ ಚರ್ಚಿಸಿ ಅದನ್ನು ಬಗೆಹರಿಸಿಕೊಳ್ಳಬೇಕಿತ್ತು. ಇದಕ್ಕಾಗಿ ರಾಜೀನಾಮೆ ನೀಡುವ ಅಗತ್ಯ ಇರಲಿಲ್ಲ. ಇವರ ಹೃದಯದಲ್ಲಿ ದೇಶ ಮತ್ತು ಸಮಾಜವಿಲ್ಲ, ಬದಲಾಗಿ ಅಧಿಕಾರವಿದೆ. ಅವರು ಅಧಿಕಾರದ ಹಿಂದೆ ಬಿದ್ದಿದ್ದಾರೆ. ಅವರಿಗೆ ಕೇವಲ ಅಧಿಕಾರದ್ದೇ ಯೋಚನೆ" ಎಂದಿದ್ದಾರೆ.
PTI

ಕೆಲವು ದಿನಗಳ ಹಿಂದೆಯೂ ಕೇಜ್ರಿವಾಲ್ ರನ್ನು ಗುರಿ ಇಟ್ಟು ಮಾತಾಡಿದ್ದ ಅಣ್ಣಾ " ಕೆಲವು ಜನ ಬಂಗಲೆಯನ್ನು ತೆಗೆದುಕೊಳ್ಳದಿರುವ ಮಾತಾಡುತ್ತಾರೆ ಮತ್ತು ತೆಗೆದುಕೊಳ್ಳುತ್ತಾರೆ "ಎಂದಿದ್ದರು. ಅಲ್ಲದೇ 'ಆಪ್' ಸರಕಾರ ತನ್ನ ನಿರೀಕ್ಷೆಗಳನ್ನು ತಲುಪಿಲ್ಲ ಎಂದು ದೂರಿದ್ದರು.

ವೆಬ್ದುನಿಯಾವನ್ನು ಓದಿ